Homeಸುದ್ದಿಲಂಕಾ ಪ್ರಧಾನಿ ಮನೆಗೆ ಜನರಿಂದ ಬೆಂಕಿ

Related Posts

ಲಂಕಾ ಪ್ರಧಾನಿ ಮನೆಗೆ ಜನರಿಂದ ಬೆಂಕಿ

*ಅಧ್ಯಕ್ಷರ ಮನೆಯ ಈಜುಕೊಳದಲ್ಲಿ ಈಜಾಡಿದ ಪ್ರತಿಭಟನೆಕಾರರು
ಕೊಲಂಬೋ: ಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಜನ ದಂಗೆ ಎದ್ದಿರುವ ಜನ ನಿನ್ನೆ ರಾತ್ರಿ ಲಂಕಾದ ಪ್ರಧಾನಿ ರನೀಲ್ ವಿಕ್ರಮ ಸಿಂಘೆ ಮನೆಗೆ ಬೆಂಕಿ ಹಚ್ಚಿದ್ದಾರೆ. ಕೊಲಂಬೋದಲ್ಲಿರುವ ಲಂಕಾ ಪ್ರಧಾನಿ ವಿಕ್ರಮ ಸಿಂಘೆ ಅವರ ಖಾಸಗಿ ನಿವಾಸಕ್ಕೆ ಪ್ರತಿಭಟನಾ ನಿರತರು ಬೆಂಕಿ ಹಚ್ಚಿದ್ದು, ಪ್ರಧಾನಿಗೆ ಸೇರಿದ ವಾಹನಗಳಿಗೆ ಹಾನಿ ಮಾಡಿದ್ದಾರೆ.
ಇದಕ್ಕೂ ಮೊದಲು ಪ್ರತಿಭಟನೆಕಾರರು ಅಧ್ಯಕ್ಷ ಗೋಟಬಯ ರಾಜಪಕ್ಸ ಅವರ ರಾಜೀನಾಮೆಗೆ ಒತ್ತಾಯಿಸಿ ನಿನ್ನೆ ಅವರ ಅಧಿಕೃತ ನಿವಾಸಕ್ಕೆ ನುಗ್ಗಿ ದಾ<ಧಲೆ ಎಸಗಿದೆ ದೃಶ್ಯಾವಳಿಗಳು ವೈರಲ್‌ ಆಗಿದ್ದವು. ಸಾವಿರಾರು ಜನರು ಅಧ್ಯಕ್ಷ ನಿವಾಸಕ್ಕೆ ನುಗ್ಗಿ ಕೈಗೆ ಸಿಕ್ಕಿದ್ದನ್ನು ಎತ್ತಿಕೊಡು ಹೋಗಿದ್ದಾರೆ. ಕೆಲವರು ನಿವಾಸದಲ್ಲಿರುವ ಈಜುಕೊಳದಲ್ಲಿ ಈಜಾಡಿ ಮೋಜುಮಸ್ತಿ ಮಾಡಿದ್ದಾರೆ. ಗೋಟಬಯ ರಾಜಪಕ್ಸ ಅವರನ್ನು ಶನಿವಾರ ರಾಜಧಾನಿ ಕೊಲಂಬೊದಲ್ಲಿರುವ ಅವರ ಅಧಿಕೃತ ನಿವಾಸದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಇದಕ್ಕೂ ಮುನ್ನ ಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವುದಕ್ಕಾಗಿ ಸರ್ವ ಪಕ್ಷ ಸರ್ಕಾರಕ್ಕೆ ದಾರಿ ಮಾಡಿಕೊಡುವುದಕ್ಕಾಗಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ರನೀಲ್ ವಿಕ್ರಮ ಸಿಂಘೆ ಘೋಷಿಸಿದ್ದರು. ಹೊಸ ಸರ್ಕಾರ ರಚನೆಯಾಗುವುದರವರೆಗೂ ವಿಕ್ರಮ ಸಿಂಘೆ ಅವರೇ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ.
ಶ್ರೀಲಂಕಾ ಇತಿಹಾಸದಲ್ಲಿ ಕಂಡು ಕೇಳರಿಯದ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಲ್ಲಿ ಈಗ ಜನರಿಗೆ ಪೆಟ್ರೋಲ್‌, ಡೀಸಿಲ್‌ನಂಥ ಅಗತ್ಯ ತೈಲವಾಗಲಿ,ಜೀವನಾವಶ್ಯಕವಾಗಿರುವ ಆಹಾರ ಧಾನ್ಯಗಳಾಗಲಿ ಸಿಗುತ್ತಿಲ್ಲ. ಸಾಲದಲ್ಲಿ ಮುಳುಗಿರುವ ಶ್ರೀಲಂಕಾದ ಒಟ್ಟು 51 ಬಿಲಿಯನ್ ಡಾಲರ್‌ ಮೊತ್ತವನ್ನು ವಿದೇಶಗಳಿಗೆ ಪಾವತಿಸಬೇಕಾಗಿದೆ. ಭಾರತ ಹೊರತುಪಡಿಸಿದರೆ ಸಂಕಷ್ಟಕ್ಕೆ ಸಿಲುಕಿರುವವವವ ಶ್ರೀಲಂಕಾಕ್ಕೆ ಬೇರೆ ಯಾವುದೇ ದೇಶ ದೊಡ್ಡಮಟ್ಟದಲ್ಲಿ ನೆರವಾಗಿಲ್ಲ.

LEAVE A REPLY

Please enter your comment!
Please enter your name here

Latest Posts

error: Content is protected !!