Sunday, October 2, 2022
spot_img
Homeಸುದ್ದಿಜು. 11 : ಪ್ರೌಢಶಾಲೆವರೆಗೆ ರಜೆ ಘೋಷಣೆ

ಜು. 11 : ಪ್ರೌಢಶಾಲೆವರೆಗೆ ರಜೆ ಘೋಷಣೆ

ಉಡುಪಿ : ಭಾರಿ ಮಳೆ ಕಾರಣ ಉಡುಪಿ ಜಿಲ್ಲೆಯಲ್ಲಿ ಜುಲೈ 11 ರಂದು ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಪಿಯುಸಿ, ಪದವಿ, ವೃತ್ತಿಪರ ಕಾಲೇಜುಗಳು ತೆರೆದಿರುತ್ತವೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ತಿಳಿಸಿದ್ದಾರೆ.

ಕಾರ್ಕಳ ಹೆಬ್ರಿ ತಾಲೂಕಿನಾದ್ಯಂತ ಭಾನುವಾರವೂ ಮಳೆ ಮುಂದುವರಿದಿದ್ದು, ವಿವಿಧೆಡೆ ಹಾನಿಯಾಗಿದೆ. ಸಾಣೂರು ಕುಂಟಲ್ಪಾಡಿಯ ಗೀತಾ ಎಂಬವರ ಮನೆ ಗೋಡೆ ಭಾಗಶ ಹಾನಿಯಾಗಿದೆ. ಅಂದಾಜು ೫೦ ಸಾವಿರ ರೂ. ನಷ್ಟವುಂಟಾಗಿದೆ. ಕುಕ್ಕುಂದೂರು ಕಾಲೋನಿ ಉದಯ ಆಚಾರ್ಯ ಎಂಬವರ ಮನೆ ಗೋಡೆ ಬಿರುಕು ಬಿಟ್ಟಿದೆ. ಇದರಿಂದ ಸುಮಾರು 25 ಸಾವಿರ ರೂ. ನಷ್ಟ ಸಂಭವಿಸಿದೆ. ಇದೇ ಗ್ರಾಮದ ಕೌಸರ್ ಬಾನು ಎಂಬವರ ಮನೆ ಕಾಂಪೌಂಡ್ ಗೋಡೆ ಹಾನಿಗೀಡಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!