ಹೆಬ್ರಿ : ಮುದ್ರಾಡಿ ಅಭಯಹಸ್ತೆ ಆದಿಶಕ್ತಿ ಮತ್ತು ಶ್ರೀ ನಂದಿಕೇಶ್ವರ ದೇವಸ್ಥಾನದಲ್ಲಿ ಧರ್ಮಯೋಗಿ ಮೋಹನ ಸ್ವಾಮೀಜಿಯವರ ಪ್ರಥಮ ವರ್ಷದ ಆರಾಧನಾ ಮಹೋತ್ಸವವು ಜು. 11ರ ಸೋಮವಾರದಂದು ಜರುಗಲಿರುವುದು. ಅಂದು ಬೆಳಿಗ್ಗೆ 7 ಗಂಟೆಯಿಂದ ಧಾರ್ಮಿಕ ಕಾರ್ಯ ನೆರವೇರಲಿದೆ. 8 ಗಂಟೆಯಿಂದ ಶ್ರೀ ಆದಿಶಕ್ತಿ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಜರುಗಲಿದೆ.
ಧರ್ಮಯೋಗಿ ಸನ್ಮಾನ
ಉದ್ಯಮಿ ಡಾ. ರವೀಂದ್ರ ಶೆಟ್ಟಿ ಬಜಗೋಳಿಯವರಿಗೆ ದೇವಸ್ಥಾನದ ವತಿಯಿಂದ ಧರ್ಮಯೋಗಿ ಬಿರುದು ನೀಡಿ ಸನ್ಮಾನಿಸಲಾಗುವುದು. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಚಿವ ವಿ. ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರು ಮನೋಹರ ರೆಡ್ಡಿ, ಮುಂಬೈ ಸುಂದರ ಕುಮಾರ್, ಮುದ್ರಾಡಿ ಗ್ರಾ. ಪಂ. ಅಧ್ಯಕ್ಷ ಮಂಜುನಾಥ ಹೆಗ್ಡೆ, ಸದಸ್ಯ ಗಣಪತಿ ಎಂ., ವಾಸ್ತುತಜ್ಞ ಪ್ರಮಲ್ ಕುಮಾರ್ ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ತಾಳಮದ್ದಲೆ
ಬಳಿಕ ಪಟ್ಲ ಸತೀಶ್ ಶೆಟ್ಟಿ ಅವರ ಭಾಗವತಿಕೆಯಲ್ಲಿ ಯಕ್ಷಗಾನ ತಾಳಮದ್ದಲೆ ರಾಮ ನಿರ್ಯಾಣ ಜರುಗಲಿದೆ. ಹಿಮ್ಮೇಳದಲ್ಲಿ ಅಮೃತಾ ಅಡಿಗ, ರವಿರಾಜ್ ಜೈನ್ ಮತ್ತು ಕೌಶಿಕ್ ರಾವ್ ಹಾಗೂ ಮುಮ್ಮೇಳದಲ್ಲಿ ಅಶೋಕ್ ಭಟ್ ಉಜಿರೆ, ಪಶುಪತಿ ಶಾಸ್ತ್ರಿ ಶಿರಂಕಲ್ಲು, ದಿನೇಶ್ ಶೆಟ್ಟಿ ಕಾವಳಕಟ್ಟೆ ಮತ್ತು ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಭಾಗವಹಿಸಲಿರುವರು.