ಕಾರ್ಕಳ : ನಿವೃತ್ತ ಉಪ ತಹಶೀಲ್ದಾರ್ ಬೆಳ್ಮಣ್ ನಿವಾಸಿ ಜಾನ್ ಮಥಾಯಸ್ (80) ಅವರು ಜು. 10ರಂದು ನಿಧನ ಹೊಂದಿದರು. ಮಥಾಯಸ್ ಅವರು ವಿವಿಧ ಗ್ರಾಮಗಳಲ್ಲಿ ಗ್ರಾಮಕರಣಿಕರಾಗಿ, ಕಾರ್ಕಳ ತಾಲೂಕು ಕಚೇರಿಯಲ್ಲಿ ಉಪತಹಶೀಲ್ದಾರ್ ಆಗಿ ಕರ್ತವ್ಯ ಸಲ್ಲಿಸಿದ್ದರು. ಮೃತರು ಪತ್ನಿ ಹಿಲ್ಡಾ ಡಿಸೋಜಾ, ಮಕ್ಕಳಾದ ಅಲೆನ್, ಲೆವಿನಾ, ಜಸ್ವೀನಾ, ಝೀನಾ ಅವರನ್ನು ಅಗಲಿದ್ದಾರೆ. ಸೋಮವಾರ ಸಂಜೆ 4 ಗಂಟೆಗೆ ಬೆಳ್ಮಣ್ ಚರ್ಚ್‌ನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ನಿವೃತ್ತ ಉಪ ತಹಶೀಲ್ದಾರ್ ಜಾನ್ ಮಥಾಯಸ್ ನಿಧನ
