Sunday, October 2, 2022
spot_img
Homeಸುದ್ದಿಕೊಡಗಿನಲ್ಲಿ ಮತ್ತೆ ಭೂಕಂಪ

ಕೊಡಗಿನಲ್ಲಿ ಮತ್ತೆ ಭೂಕಂಪ

ಮಡಿಕೇರಿ: ಕೊಡಗು ಪರಿಸರದಲ್ಲಿ ಮತ್ತೆ ಭೂಕಂಪದ ಅನುಭವವಾಗಿದೆ. ಮಳೆಗಾಲದಲ್ಲಿ ಸಂಭವಿಸುತ್ತಿರುವ ಭೀಕರ ಭೂ ಕುಸಿತಗಳಿಂದ ಕಂಗೆಟ್ಟಿರುವ ಜನರು ಈಗ ಭೂಕಂಪದಿಂದಾಗಿ ಮತ್ತಷ್ಟು ಬೆಚ್ಚಿಬೀಳುತ್ತಿದ್ದಾರೆ. ಇಂದು ಬೆಳಗ್ಗೆ 6.23ರ ಹೊತ್ತಿದೆ ಭೂಕಂಪವಾಗಿದೆ. ಭೂಮಿ ನಡುಗಿದ ಅನುಭವವಾಗುತ್ತಲೇ ಜನರು ಭೀತಿಯಿಂದ ಮನೆಗಳಿಂದ ಹೊರಗೋಡಿ ಬಂದಿದ್ದಾರೆ. ಇದು ಈ ಕಳೆದೊಂದು ತಿಂಗಳಲ್ಲಿ ಇಲ್ಲಿ ಸಂಭವಿಸುತ್ತಿರುವ ಒಂಭತ್ತನೇ ಭೂಕಂಪ. ಚೆಂಬು, ಪೆರಾಜೆ ಹಾಗೂ ಸಂಪಾಜೆಯಲ್ಲಿ ಭೂಮಿ ಕಂಪಿಸಿದೆ.ದೊಡ್ಡ ಶಬ್ದ ಕೇಳಿಬಂದಿದೆ ಎಂದು ಜನರು ತಿಳಿಸಿದ್ದಾರೆ.
ಆಗಾಗ ಸಂಭವಿಸುತ್ತಿರುವ ಭೂಕಂಪ ಜನರ ನೆಮ್ಮದಿಯನ್ನು ಕಸಿದುಕೊಂಡಿದೆ. ಜನರು ರಾತ್ರಿ ನಿದ್ದೆಯಿಲ್ಲದೆ ಕಳೆಯುವಂತಾಗಿದೆ. ಇಷ್ಟರತನಕ ದೊಡ್ಡಮಟ್ಟದ ಅಪಾಯವಾಗಿರದಿದ್ದರೂ ಇದು ಯಾವುದೋ ದೊಡ್ಡ ಅನಾಹುತಕ್ಕೆ ಮುನ್ಸೂಚನೆಯಾಗಿರಬಹುದು ಎಂಬ ಭಯ ಜನರನ್ನು ಕಾಡುತ್ತಿದೆ.

LEAVE A REPLY

Please enter your comment!
Please enter your name here

Most Popular

error: Content is protected !!