ಕಡಬ: ಇಲ್ಲಿಗೆ ಸಮೀಪ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯ ಕಾಣಿಯೂರು ಬಳಿ ಬೈತಡ್ಕದ ಸೇತುವೆಯಿಂದ ಹೊಳೆಗೆ ಧುಮುಕಿದ್ದ ಕಾರು ಮತ್ತೆ ಕೊಚ್ಚಿಕೊಂಡು ಹೋಗಿದೆ. ನಿನ್ನೆ ರಾತ್ರಿ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದಿದ್ದ ಕಾರು ಇಂದು ಬೆಳಗ್ಗೆ ಸುಮಾರು 100 ಮೀಟರ್ ದೂರದಲ್ಲಿ ಪತ್ತೆಯಾಗಿತ್ತು. ಆದರೆ ಅದನ್ನು ಮೇಲೆತ್ತುವ ಮೊದಲೇ ನೀರಿನ ರಭಸಕ್ಕೆ ಮತ್ತೆ ಕೊಚ್ಚಿಕೊಂಡು ಹೋಗಿದೆ.
ಶನಿವಾರ ಮಧ್ಯರಾತ್ರಿಯ ಬಳಿಕ ಈ ಕಾರು ಸೇತುವೆಗೆ ಡಿಕ್ಕಿ ಹೊಡೆದು ಹೊಳೆಗೆ ಬಿದ್ದಿರುವ ದೃಶ್ಯ ಪಕ್ಕದ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದರ ಆಧಾರದಲ್ಲಿ ಇದು ಮಾರುತಿ ಕಾರು ಇರಬೇಕೆಂದು ಊಹಿಸಲಾಗಿದೆ.
ನೂಕು ನುಗ್ಗಲು; ಲಾಠಿ ಪ್ರಹಾರ
ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸುವ ಸಲುವಾಗಿ ಹೋಳೆ ದಡದಲ್ಲಿ ಜನ ಕಿಕ್ಕಿರಿದು ಸೇರಿದ್ದು, ನೂಕುನುಗ್ಗಲು ತಪ್ಪಿಸಲು ಪೊಲೀಸರು ಎರಡು ಸಲ ಲಘು ಲಾಠಿ ಪ್ರಹಾರ ಮಾಡಿದ್ದಾರೆ.