ಕಾರ್ಕಳ : ನಗರದ ಪೆರ್ವಾಜೆ ಎಲ್‌ಐಸಿ ಕಚೇರಿ ಬಳಿ ಜು. 9ರ ರಾತ್ರಿ ಕಾರೊಂದು ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೀಪ್ ಕಂಪನಿಯ ಕಾರು ಇದಾಗಿದ್ದು, ಘಟನೆಯಲ್ಲಿ ಎಡಬದಿಯಲ್ಲಿದ್ದ ಮನೆಯ ಕಾಂಪೌಂಡ್ ಹಾಗೂ ಬಲಬದಿಯಲ್ಲಿದ್ದ ವಿದ್ಯುತ್ ಕಂಬ ಹಾನಿಗೀಡಾಗಿದೆ. ಘಟನೆಯಿಂದ ಮೆಸ್ಕಾಂ ಕಂಪೆನಿಗಾದ ನಷ್ಟವನ್ನು ಭರಿಸುವುದಾಗಿ ಕಾರು ಮಾಲಕರು ಇಲಾಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಆಕ್ರೋಶ
ಐಷಾರಾಮಿ ಕಾರಿನಲ್ಲಿ ಕೆಲವರು ಬೇಕಾಬಿಟ್ಟಿ ಅಜಾಗರೂಕತೆಯಿಂದ ಕಾರು ಚಾಲನೆ ಮಾಡುತ್ತಾರೆ. ಹಲವಾರು ಬಾರಿ ಅಪಘಾತ ಸಂಭವಿಸಿ ಕಾರಿನಲ್ಲಿದ್ದವರು ಪಾರಾಗುತಿದ್ದರೂ ಅಮಾಯಕ ಪಾದಚಾರಿಗಳು ಗಾಯಳಾಗುವುದು, ಸಾವನ್ನಪ್ಪುವುದು ಕಂಡುಬರುತ್ತಿದೆ ಎಂದು ಸ್ಥಳೀಯರೋರ್ವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.