Saturday, October 1, 2022
spot_img
Homeಸುದ್ದಿಯುವಶಕ್ತಿಯಿಂದ ನವಸಮಾಜದ ನಿರ್ಮಾಣ: ಡಾ| ಮೋಹನ ಆಳ್ವ

ಯುವಶಕ್ತಿಯಿಂದ ನವಸಮಾಜದ ನಿರ್ಮಾಣ: ಡಾ| ಮೋಹನ ಆಳ್ವ

*ಭುವನೇಂದ್ರದಲ್ಲಿ ಜಿಲ್ಲಾ ಗೈಡ್ ಆಯುಕ್ತೆ ಜ್ಯೋತಿ ಜೆ. ಪೈಯವರ ಅಭಿನಂದನಾ ಸಮಾರಂಭ
ಕಾರ್ಕಳ : ಇಂದು ದೇಶ ಜಗತ್ತಿನ ಗಮನವನ್ನು ಸೆಳೆಯುತ್ತಿದೆ.ಇತರ ರಾಷ್ಟ್ರಗಳಿಗೆ ತನ್ನ ಶ್ರೇಷ್ಠತೆಯನ್ನು ಎತ್ತಿತೋರಿಸುತ್ತಿದೆ. ಈ ನಿಟ್ಟಿನಲ್ಲಿ ದೇಶದ ಅಮೂಲ್ಯ ಸಂಪತ್ತೆನಿಸಿರುವ ಯುವ ಜನಾಂಗವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಕೌಟ್ಸ್ ಗೈಡ್ಸ್ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದು ಬಹಳ ಅವಶ್ಯವೆನಿಸಿದೆ. ಯುವ ಜನಾಂಗವನ್ನು ಮತ್ತೆ ಜಗತ್ತಿನೆಲ್ಲೆಡೆ ಪರಿಚಯಿಸುವ ಅಂತಾರಾಷ್ಟ್ರೀಯ ಜಾಂಬೂರಿ ಮೂಡಬಿದಿರೆಯಲ್ಲಿ ಡಿಸೆಂಬರ್‌ನಲ್ಲಿ ಆಯೋಜಿಸಲಿದ್ದೇವೆ ಎಂದು ಮೈಸೂರು ವಿಭಾಗದ ಸ್ಕೌಟ್ಸ್ ಗೈಡ್ಸ್ ಆಯುಕ್ತ , ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು
ಕಾರ್ಕಳದ ಭುವನೇಂದ್ರ ಪ್ರೌಢಶಾಲೆಯಲ್ಲಿ ಕಾರ್ಕಳ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಆಯೋಜಿಸಿದ ಉಡುಪಿ ಜಿಲ್ಲಾ ಗೈಡ್ಸ್‌ ಆಯುಕ್ತೆ ಜ್ಯೋತಿ ಜೆ. ಪೈಯವರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಜಗನ್ನಾಥ ಪೈ ಹಾಗೂ ಜ್ಯೋತಿ ಜೆ ಪೈ ದಂಪತಿಯನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಕಾರ್ಕಳ ಸ್ಕೌಟ್ಸ್ ಗೈಡ್ಸ್. ಘಟಕದ ಅಧ್ಯಕ್ಷ ಎಂ. ಕೆ. ವಿಜಯಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಪಿ. ಶ್ರೀಧರ್ ಆಚಾರ್ ಶುಭಾಶಂಸನೆಗೈದರು. ಭುವನೇಂದ್ರ ವಿದ್ಯಾಸಂಸ್ಥೆಯ ಸಂಚಾಲಕ ಎಸ್. ನಿತ್ಯಾನಂದ ಪೈ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ವೃಂದಾ ಶೆಣೈ, ಉಡುಪಿ ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷ ಎಡ್ವಿನ್ ಆಳ್ವ, ಜಿಲ್ಲಾ ಸ್ಕೌಟ್ ತರಬೇತು ಆಯುಕ್ತ ಆನಂದ ಅಡಿಗ, ಜಿಲ್ಲಾ ಗೈಡ್ ತರಬೇತು ಆಯುಕ್ತೆ ಸಾವಿತ್ರಿ ಮನೋಹರ್, ಉಡುಪಿ ಘಟಕದ ಶೇಖರ್ ಕಲ್ಮಾಡಿ, ರಾಜ್ಯ ಸಹ ಸಂಘಟನಾ ಆಯುಕ್ತೆ ಸುಮನ ಶೇಖರ್, ಕಾರ್ಕಳ ಘಟಕದ ಉಪಾಧ್ಯಕ್ಷ ಜಗದೀಶ್ ಹೆಗ್ಡೆ, ಸಹಾಯಕ ಜಿಲ್ಲಾ ಆಯುಕ್ತೆ ವೃಂದಾ ಹರಿಪ್ರಕಾಶ್ ಶೆಟ್ಟಿ, ಗೀತಾ ಸುಧೀರ್ ಕಿಣಿ ಮೊದಲಾದವರು ಉಪಸ್ಥಿತರಿದ್ದರು.
ಸ್ಕೌಟ್ಸ್ ಗೈಡ್ಸ್‌ನಲ್ಲಿ ವಿಶೇಷವಾಗಿ ತೊಡಗಿಸಿಕೊಂಡ ಶಿಕ್ಷಕರಾದ ಆನಂದ ಪೂಜಾರಿ, ನರೇಂದ್ರ ಕಾಮತ್, ಯಶೋಧಾ ಹೆಗ್ಡೆ, ನವೀನ್ ಎ., ರಾಜ್ಯ ಸಹ ಸಂಘಟನಾ ಆಯುಕ್ತ ನಿತಿನ್ ಅಮಿನ್ ಹಾಗೂ ರಂಗೋಲಿಯಲ್ಲಿ ‌ಸನ್ಮಾನಿತರನ್ನು ಚಿತ್ರಿಸಿದ ಸೀಮಾ ಕಾಮತ್ ಅವರನ್ನು ಗೌರವಿಸಲಾಯಿತು.
ಕೋಶಾಧಿಕಾರಿ ಸತೀಶ್ ಶೆಟ್ಟಿ ಸ್ವಾಗತಿಸಿ, ಸಹಕಾರ್ಯದರ್ಶಿ ಪ್ರಿಯಾ ಪ್ರಭು ಧನ್ಯವಾದವಿತ್ತರು. ಕಾರ್ಯದರ್ಶಿ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಇಂದಿರಾ ಪಿ. ನಾಯಕ್ ಪ್ರಕಾಶ್ ಬೈಲೂರು ಸೂರ್ಯ ತೆಳ್ಳಾರ್ ಸಹಕರಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!