ಕಾರ್ಕಳ : ಶನಿವಾರ ಕಾರ್ಕಳದಲ್ಲಿ ಮಳೆ ಮುಂದುವರಿದಿದೆ. ಮಳೆಗೆ ಕಾಳಿಕಾಂಬ ನಿವಾಸಿ ಸುರೇಂದ್ರ ಶೆಟ್ಟಿ ಎಂಬವರ ಮನೆ ಸಂಪೂರ್ಣ ಕುಸಿದುಬಿದ್ದಿದೆ. ಮುಂಡ್ಲಿ ಕಿಟ್ಟಿ ಪೂಜಾರಿ ಎಂಬವರ ಮನೆಯ ಕಾಂಪೌಂಡ್ ಕುಸಿದಿದೆ. ಇರ್ವತ್ತೂರು ಗ್ರಾಮದ ವರದೂರು ರಮೇಶ್ ಪೂಜಾರಿ ಎಂಬವರ ಮನೆ ಗೋಡೆ ಕುಸಿದು ಸುಮಾರು 25 ಸಾವಿ ರೂ. ನಷ್ಟವುಂಟಾಗಿದೆ.
ಮಂಡ್ಕೂರು ಗ್ರಾಮದ ಪೊಸ್ರಾಲು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಸಂಪ ಶೆಟ್ಟಿ ಎಂಬವರ ಮನೆ ಅಂಗಳವು ನೀರಿನಿಂದ ಜಲಾವೃತಗೊಂಡಿದೆ.
ಕಾರ್ಕಳದಲ್ಲಿ ಇಂದಿನ ಮಳೆ ಪ್ರಮಾಣ
ಕಾರ್ಕಳ ನಗರದಲ್ಲಿ 147.02 ಮಿ.ಮೀ., ಇರ್ವತ್ತೂರು 153.06 ಮಿ.ಮೀ., ಅಜೆಕಾರು 117.08 ಮಿ.ಮೀ., ಸಾಣೂರು 180.06 ಮಿ.ಮೀ., ಕೆದಿಂಜೆ 129.0 ಮಿ.ಮೀ., ಮುಳಿಕ್ಕಾರು 177.04 ಮಿ.ಮೀ., ಕೆರ್ವಾಶೆ 170.2 ಮಿ.ಮೀ. ಮಳೆಯಾಗಿದೆ.