Sunday, October 2, 2022
spot_img
Homeಸುದ್ದಿಅಮರನಾಥ ಮೇಘಸ್ಫೊಟ : 16 ಭಕ್ತರ ಸಾವು

ಅಮರನಾಥ ಮೇಘಸ್ಫೊಟ : 16 ಭಕ್ತರ ಸಾವು

ಅಮರನಾಥ: ಅಮರನಾಥ ಗುಹಾ ದೇವಾಲಯದ ಬಳಿ ಮೇಘಸ್ಫೋಟದಿಂದ ಉಂಟಾದ ದಿಢೀರ್‌ ನೆರೆಯಲ್ಲಿ ಕೊಚ್ಚಿಹೋಗಿ ಮೃತಪಟ್ಟವರ ಸಂಖ್ಯೆ 16ಕ್ಕೇರಿದೆ ಹಾಗೂ 40 ಮಂದಿ ಗಾಯಗೊಂಡಿದ್ದಾರೆ. ಸುಮಾರು 35 ಮಂದಿ ನಾಪತ್ತೆಯಾಗಿದ್ದು ಸೇನೆ ಮತ್ತು ಸ್ಥಳೀಯ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಭೀಖರ ಮಳೆಯಿಂದಾಗಿ ಪರ್ವತದಿಂದ ಧುಮ್ಮಿಕ್ಕಿ ಬಂದ ನೀರಿನಲ್ಲಿ ಅಮರನಾಥ ಯಾತ್ರಿಗಳ 25ಕ್ಕೂ ಹೆಚ್ಚು ಟೆಂಟ್‌ಗಳು ಕೊಚ್ಚಿಕೊಂಡು ಹೋಗಿವೆ. ಈ ಪರಿಸ್ಥಿಯಲ್ಲೇ ರಕ್ಷಣಾ ಕಾರ್ಯಾಚರಣೆ ನಡೆಸಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೆರೆಯಲ್ಲಿ ಮೂರು ಅಡುಗೆ ಶಾಲೆಗಳು ಕೂಡ ಕೊಚ್ಚಿ ಹೋಗಿವೆ.
ಶುಕ್ರವಾರ ಸಂಜೆ 5.30ರ ಸುಮಾರಿಗೆ ಅಮರನಾಥದಲ್ಲಿ ಮೇಘಸ್ಫೋಟವಾಗಿದೆ. ಭೀಕರವಾಗಿ ಸುರಿದ ಮಳೆಯಿಂದ ದಿಢೀರ್‌ ಪರ್ವತದ ಮೇಲಿಂದ ನೀರು ಭೋರ್ಗರೆದು ಹರಿದು ಬಂದ ಕಾರಣ ಯಾತ್ರಿಕರಿಗೆ ತಂಗಲು ಬಾಲ್ತಲ್‌ ಬೇಸ್‌ನಲ್ಲಿ ಹಾಕಿದ್ದ ಟೆಂಟ್‌ಗಳು ಮತ್ತು ಮೂರು ಅಡುಗೆ ಶಾಲೆಗಳು ಕೊಚ್ಚಿಕೊಂಡು ಹೋಗಿವೆ.
ಇಷ್ಟರ ತನಕ 16 ಶವಗಳು ಸಿಕ್ಕಿವೆ. ಬಹಳಷ್ಟು ಮಂದಿ ನಾಪತ್ತೆಯಾಗಿರುವುದರಿಂದ ಸಾವಿನ ಸಂಖ್ಯೆ ಏರುವ ಸಾಧ್ಯತೆಯಿದೆ. ಕಲ್ಲುಮಣೀನ ರಾಶಿಯಡಿಯಲ್ಲಿ ಸಿಲುಕಿದವರನ್ನು ರಕ್ಷಿಸಲು ಸೇನೆ ಮತ್ತಿ ರಾಷ್ಟ್ರೀಯ ವಿಕೋಪ ಪ್ರತಿಸ್ಪಂದನಾ ಪಡೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ.
ಸುಮಾರು 15,000 ಮಂದಿ ಈ ಸಲ ಅಮರನಾಥ ಯಾತ್ರೆ ನಡೆಸಲು ಹೆಸರು ನೋಂದಾಯಿಸಿಕೊಂಡಿದ್ದರು. ಸದ್ಯಕ್ಕೆ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!