Sunday, October 2, 2022
spot_img
Homeಸುದ್ದಿಸಸಿಕಾಂತ್‌ ಸೆಂಥಿಲ್‌ ಕಾಂಗ್ರೆಸ್‌ ವಾರ್‌ರೂಮ್‌ ಮುಖ್ಯಸ್ಥ

ಸಸಿಕಾಂತ್‌ ಸೆಂಥಿಲ್‌ ಕಾಂಗ್ರೆಸ್‌ ವಾರ್‌ರೂಮ್‌ ಮುಖ್ಯಸ್ಥ

ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈಗಲೇ ಭರ್ಜರಿ ತಯಾರಿ ಪ್ರಾರಂಭಿಸಿರುವ ಕಾಂಗ್ರೆಸ್‌ ವಾರ್‌ರೋಮ್‌ ಒಂದನ್ನು ರಚಿಸಿ ಅದಕ್ಕೆ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದ ಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿದೆ.
ಕೆಪಿಸಿಸಿ ಮಾಡಿರುವ ಈ ನೇಮಕಾತಿಯನ್ನು ಕಾಂಗ್ರೆಸ್‌ ಹೈಕಮಾಂಡ್‌ ಅನುಮೋದಿಸಿದೆ. ರಾಜ್ಯ ಪ್ರಚಾರ ಸಮಿತಿಯೊಂದಿಗೆ ಸಮನ್ವಯ ಸಾಧಿಸಿ ಚುನಾವಣೆಯ ರಣತಂತ್ರ ರೂಪಿಸುವ ಹೊಣೆಯನ್ನು ವಾರ್‌ರೂಂಗೆ ವಹಿಸಲಾಗಿದೆ. ಇಡೀ ರಾಜ್ಯದ ಪ್ರತಿ ಕ್ಷೇತ್ರದ ಸಾಧಕಬಾಧಕಗಳನ್ನು ಸೆಂಥಿಲ್‌ ನೇತೃತ್ವದ ವಾರ್‌ರೂಮ್‌ ಪರಾಮರ್ಶಿಸಲಿದೆ.
ಸುನಿಲ್‌ ಕನುಗೌಳಿ ವಾರ್‌ರೂಮ್‌ ಉಸ್ತುವಾರಿಯಾಗಿ ಮತ್ತು ಸೂರಜ್‌ ಹೆಗ್ಡೆ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದ ಸೆಂಥಿಲ್‌ 2019ರಲ್ಲಿ ಪೌರತ್ವ ಕಾಯಿದೆಗೆ ತಿದ್ದುಪಡಿ ಮಾಡುವುದನ್ನು ವಿರೋಧಿಸ ಹುದ್ದೆಗೆ ರಾಜೀನಾಮೆ ನೀಡಿ ಬಳಿಕ ಕಾಂಗ್ರೆಸ್‌ ಸೇರಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!