Saturday, October 1, 2022
spot_img
Homeಸುದ್ದಿರಾಜ್‌ ಬಬ್ಬರ್‌ಗೆ ಎರಡು ವರ್ಷ ಜೈಲು

ರಾಜ್‌ ಬಬ್ಬರ್‌ಗೆ ಎರಡು ವರ್ಷ ಜೈಲು

ಲಖನೌ: ಚುನಾವಣಾಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಕಾಂಗ್ರೆಸ್‌ ಮುಖಂಡ ಹಾಗೂ ಬಾಲಿವುಡ್‌ ನಟ ರಾಜ್ ಬಬ್ಬರ್‌ಗೆ ಇಲ್ಲಿನ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕೇಸು ರಾಜ್‌ ಬಬ್ಬರ್‌ ವಿರುದ್ಧ ದಾಖಲಾಗಿತ್ತು. ರಾಜ್ ಬಬ್ಬರ್ ವಿರುದ್ಧವಿದ್ದ ಮೂರು ಪ್ರಕರಣಗಳು ಸಾಬೀತಾಗಿ ನ್ಯಾಯಾಲಯ ಈ ತೀರ್ಪು ನೀಡಿ ಜೈಲು ಶಿಕ್ಷೆ ಜತೆಗೆ ನ್ಯಾಯಾಲಯ ರೂ. 8,500 ರೂ.ದಂಡ ವಿಧಿಸಿದೆ.
1996ರ ಮೇ ತಿಂಗಳಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ರಾಜ್ ಬಬ್ಬರ್ ವಿರುದ್ಧ ಚುನಾವಣಾಧಿಕಾರಿ ಎಫ್ ಐಆರ್ ದಾಖಲಿಸಿದ್ದರು. ಆ ಸಂದರ್ಭದಲ್ಲಿ ರಾಬ್ ಬಬ್ಬರ್ ಸಮಾಜವಾದಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!