Saturday, October 1, 2022
spot_img
Homeಸುದ್ದಿಕಾರ್ಕಳದ ರಾಧಿಕಾದಲ್ಲಿ ಹರಿಕಥೆ ಅಲ್ಲ ಗಿರಿಕಥೆ ಯಶಸ್ವಿ ಪ್ರದರ್ಶನ

ಕಾರ್ಕಳದ ರಾಧಿಕಾದಲ್ಲಿ ಹರಿಕಥೆ ಅಲ್ಲ ಗಿರಿಕಥೆ ಯಶಸ್ವಿ ಪ್ರದರ್ಶನ

ಕಾರ್ಕಳ : ನಗರದ ರಾಧಿಕಾ ಚಿತ್ರಮಂದಿರದಲ್ಲಿ ಹರಿಕಥೆ ಅಲ್ಲ ಗಿರಿಕಥೆ ಸಿನೇಮ ಯಶಸ್ವಿಯಾಗಿ ನಡೆಯುತ್ತಿದೆ. ಬೆಳಗ್ಗೆ 10, ಮಧ್ಯಾಹ್ನ 1, ಸಂಜೆ 4 ಮತ್ತು ರಾತ್ರಿ 7ಕ್ಕೆ ಹೋಗೆ ನಿತಯ ನಾಲ್ಕು ಪ್ರದರ್ಶನಗಳಿವೆ.
ಕರಣ್‌ ಅನಂತ್‌ ಮತ್ತು ಅನಿರುದ್ಧ ಮಹೇಶ್‌ ಚಿತ್ರಕತೆ ಬರೆದು ನಿರ್ದೇಶಿಸಿರುವ ಈ ಚಿತ್ರ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ರಿಷಭ್‌ ಶೆಟ್ಟಿ, ರಚನಾ ಇಂದರ್‌,ತಪಸ್ವಿನಿ ಪೂಣಚ್ಚ, ಹೊನ್ನವಳ್ಳಿ ಕೃಷ್ಣ, ಅನಿರುದ್ಧ ಮಹೇಶ್‌, ದಿನೇಶ್‌ ಮಂಗಳೂರು, ಪ್ರಮೋದ್‌ ಶೆಟ್ಟಿ ಮತ್ತಿತರರ ತಾರಾಗಣವಿರುವ ಹರಿಕಥೆ ಅಲ್ಲ ಗಿರಿಕಥೆ ಹಾಸ್ಯಮಯ ಚಿತ್ರವಾಗಿದ್ದರೂ ವಿಡಂಬನಾತ್ಮಕವಾಗಿ ಭರಪೂರ ಮನರಂಜನೆ ನೀಡುತ್ತದೆ.
ರಿಷಬ್‌, ಈ ಸಿನಿಮಾದಲ್ಲಿ ಸಿನಿಮಾ ನಿರ್ದೇಶಕನಾಗುವ ಹಂಬಲ ಇರುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.
‘ಹರಿಕಥೆ ಅಲ್ಲ ಗಿರಿಕಥೆ’ಯಲ್ಲಿ ಮೂವರು ‘ಗಿರಿ’ಗಳಿದ್ದಾರೆ. ಡೈರೆಕ್ಟರ್ ಗಿರಿ (ರಿಷಬ್‌), ವಿಲನ್ ಗಿರಿ ಮತ್ತು ಗಿರಿಜಾ (ರಚನಾ). ಇಲ್ಲಿ ಒಬ್ಬೊಬ್ಬರದು ಒಂದೊಂದು ಕಥೆ. ಆದರೆ ಎಲ್ಲರಿಗೂ ಸಿನಿಮಾರಂಗಕ್ಕೆ ಕಾಲಿಡಬೇಕು ಎಂಬುದೇ ಮೂಲ ಗುರಿ, ಉದ್ದೇಶ. ಫ್ಲ್ಯಾಶ್‌ಬ್ಯಾಕ್ ಶೈಲಿಯಲ್ಲಿ ಕಥೆಯನ್ನು ಹೇಳುತ್ತ ಸಾಗುವ ನಿರ್ದೇಶಕರು, ಈ ಮೂವರ ಹಿನ್ನೆಲೆಯನ್ನು ಹೇಳುತ್ತಾರೆ.

LEAVE A REPLY

Please enter your comment!
Please enter your name here

Most Popular

error: Content is protected !!