Saturday, October 1, 2022
spot_img
Homeಸ್ಥಳೀಯ ಸುದ್ದಿಮರ್ಣೆ : ಫಲಾನುಭವಿಗಳಿಗೆ ಕಡತ ಹಸ್ತಾಂತರ

ಮರ್ಣೆ : ಫಲಾನುಭವಿಗಳಿಗೆ ಕಡತ ಹಸ್ತಾಂತರ

ಕಾರ್ಕಳ : ಮರ್ಣೆ ಗ್ರಾಮ ಪಂಚಾಯತ್‌ ಸಭಾಂಗಣದಲ್ಲಿ ಉಚಿತ 75 ಯೂನಿಟ್ ವಿದ್ಯುತ್ ಪೂರೈಕೆಯ ಫಲಾನುಭವಿಗಳಿಗೆ ಗುರುವಾರ ಕಡತ ವಿತರಣಾ ಕಾರ್ಯಕ್ರಮ ನಡೆಯಿತು. ಸಚಿವ ವಿ. ಸುನೀಲ್‌ ಕುಮಾರ್‌ ಪಲಾನುಭವಿಗಳಿಗೆ ಕಡತ ಹಸ್ತಾಂತರಿಸಿದರು. ಗ್ರಾ. ಪಂ. ಅಧ್ಯಕ್ಷೆ ಜ್ಯೋತಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದು, ಮೆಸ್ಕಾಂ ಇಲಾಖೆಯ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾ.ಪಂ. ಮಾಜಿ ಉಪಾಧ್ಯಕ್ಷ ಹರೀಶ್‌ ನಾಯಕ್‌, ಪಂಚಾಯತ್‌ ಸದಸ್ಯರಾದ ಗುರುಪ್ರಸಾದ್‌ ರಾವ್,‌ ಉದಯ್‌ ಕುಲಾಲ್‌, ರಾಕೇಶ್‌ ನಾಯ್ಕ್‌, ಯಶೋಧಾ ಶೆಟ್ಟಿ, ಪಂ. ಅಭಿವೃದ್ಧಿ ಅಧಿಕಾರಿ ತಿಲಕ್‌ ರಾಜ್‌ ಉಪಸ್ಥಿತರಿದ್ದರು. ಸದಸ್ಯ ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!