Sunday, October 2, 2022
spot_img
Homeಸುದ್ದಿನಿರ್ದೇಶಕಿ ಲೀನಾ ಮಣಿಮೇಖಲೈ ವಿರುದ್ಧ ಲುಕ್‌ಔಟ್‌ ನೋಟಿಸ್‌

ನಿರ್ದೇಶಕಿ ಲೀನಾ ಮಣಿಮೇಖಲೈ ವಿರುದ್ಧ ಲುಕ್‌ಔಟ್‌ ನೋಟಿಸ್‌

ಭೋಪಾಲ್‌: ಕಾಳಿ ಮಾತೆಯನ್ನು ವಿಕೃತವಾಗಿ ತೋರಿಸಿ ವಿವಾದಕ್ಕೊಳಗಾಗಿರುವ ಭಾರತ ಮೂಲದ ಪ್ರಸ್ತುತ ಕೆನಡದಲ್ಲಿರುವ ಸಾಕ್ಷ್ಯಚಿತ್ರ ನಿರ್ದೇಶಕಿ ಲೀನಾ ಮಣೆಮೇಖಲೈಗೆ ಮಧ್ಯಪ್ರದೇಶ ಪೊಲೀಸರು ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಿದ್ದಾರೆ.
ಲೀನಾ ಮಣಿಮೇಖಲೈ ಇತ್ತೀಚೆಗೆ ಕಾಳಿ ಮಾತೆ ಸಿಗರೇಟ್‌ ಸೇದುತ್ತಿರುವ ಹಾಗೂ ಕೈಯಲ್ಲಿ ಸಲಿಂಗಕಾಮಿಗಳ ಧ್ವಜ ಹಿಡಿದಿರುವ ತನ್ನ ಕಾಳಿ ಎಂಬ ಸಾಕ್ಷ್ಯಚಿತ್ರದ ಪೋಸ್ಟರ್‌ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದರು.
ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರ ನಿರ್ದೇಶಕಿ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಲು ಕೇಂದ್ರ ಸರಕಾರವನ್ನು ಒತ್ತಾಯಿಸುವುದಾಗಿ ನಿನ್ನೆ ಹೇಳಿದ್ದರು. ಅನಂತರ ಮಧ್ಯ ಪ್ರದೇಶ ಪೊಲೀಸರೇ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಿದ್ದಾರೆ.
ಇದರ ಜತೆಗೆ ಲೀನಾ ಮಣಿಮೇಖಲೈ ಅವರನ್ನು ಸಮರ್ಥಿಸಿಕೊಂಡಿರುವ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ವಿರುದ್ಧವೂ ಭೋಪಾಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!