Sunday, October 2, 2022
spot_img
Homeಸುದ್ದಿಶುಕ್ರವಾರವೂ ಮುಂದುವರಿದ ವರುಣನ ಆರ್ಭಟ

ಶುಕ್ರವಾರವೂ ಮುಂದುವರಿದ ವರುಣನ ಆರ್ಭಟ

ಕಾರ್ಕಳ : ಶುಕ್ರವಾರವೂ ವರುಣನ ಆರ್ಭಟ ಮುಂದುವರಿದಿದ್ದು, ಕೆರ್ವಾಶೆ ಭಾಗದಲ್ಲಿ ಬೀಸಿದ ಗಾಳಿ ಮಳೆಗೆ ಶೆಟ್ಟಿಬೆಟ್ಟು ಸರಸ್ವತಿ ಗುಡಿಗಾರ ಎಂಬವರ ಮನೆ ಗೋಡೆ ಕುಸಿದು ಬಿದ್ದಿದೆ. ಪರಿಣಾಮ ಮನೆ ಸಂಪೂರ್ಣ ಹಾನಿಗೀಡಾಗಿದೆ. ಮನೆಯಂಗಳದಲ್ಲಿ ಹಂಚು ತುಂಡಾಗಿ ಬಿದ್ದಿದೆ.

ಸ್ಥಳಾಂತರಗೊಂಡಿದ್ದರು
ಸರಸ್ವತಿ ಅವರ ಮನೆ ಬಿರುಕುಬಿಟ್ಟಿದ್ದ ಕಾರಣ ಗುರುವಾರ ಸರಸ್ವತಿ, ಅವರ ಮಗಳು, ಅಳಿಯ, ಮತ್ತಿಬ್ಬರು ಮಕ್ಕಳು ಬೇರೆಡೆ ಸ್ಥಳಾಂತರಗೊಂಡಿದ್ದರು. ಶುಕ್ರವಾರ ಮನೆ ಕುಸಿದ್ದು ಬಿದ್ದಿದ್ದು ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಕರಣಿಕ ರವಿಚಂದ್ರ ಕೆ. ಪಾಟೀಲ್‌, ಗ್ರಾ.ಪಂ. ಸದಸ್ಯ ಪ್ರಕಾಶ್‌ ಪೂಜಾರಿ, ಗ್ರಾಮಸಹಾಯ ದಿನೇಶ್‌ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಹೆಬ್ರಿ ತಾಲೂಕು ಮುದ್ರಾಡಿ ಗ್ರಾಮದ ಹೆಮ್ಮಣ್ಣು ಮೆಟ್ಟಕಲ್ಲು ಎಂಬಲ್ಲಿ ಮನೆ ಸಮೀಪದ ಧರೆ ಕುಸಿದಿದೆ.

ಕೆರ್ವಾಶೆ

LEAVE A REPLY

Please enter your comment!
Please enter your name here

Most Popular

error: Content is protected !!