ಸಾಮಾಜಿಕ ಮಾಧ್ಯಮದಲ್ಲಿ ಬಾಲಕಿಗೆ ಕಿರುಕುಳ: ಕಾರ್ಕಳದ ಯುವಕ ಅರೆಸ್ಟ್‌

ಕಾರ್ಕಳ: ಅಪ್ರಾಪ್ತ ವಯಸ್ಸಿನ ಹಿಂದು ಹುಡುಗಿಗೆ ಸಾಮಾಜಿಕ ಮಾಧ್ಯಮದಲ್ಲಿ ಕಿರುಕುಳ ನೀಡಿದ ಯುವಕನನ್ನು ಕಾರ್ಕಳ ನಗರ ಪೊಲೀಸರು ಇಂದು ಬಂಧಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಪರಿಚಿತಳಾದ 14ರ ಹರೆಯದ ಹಿಂದು ಯುವತಿಗೆ ಕಾರ್ಕಳದ ಹುಡ್ಕೋ ಕಾಲನಿ ನಿವಾಸಿ ಮಹಮ್ಮದ್ ಯಾಸಿನ್ (21) ಎಂಬಾತ ಆಶ್ಲೀಲ ಸಂದೇಶಗಳನ್ನು ರವಾನಿಸಿ ಕಿರುಕುಳ ನೀಡುತ್ತಿದ್ದ. ಈ ಕುರಿತು ಇಂದು ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಾಮಾಜಿಕ ಮಾಧ್ಯಮದ ಮೂಲಕ ಆತ ಬಾಲಕಿಯನ್ನು ಪ್ರೀತಿಸುವಂತೆ ಹಾಗೂ ತನ್ನ ಜತೆ ಬರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.
ಆರೋಪಿಯನ್ನು ನಗರ ಠಾಣೆ ಪೊಲೀಸರು ಪೋಕ್ಸೊ ಕಾಯಿದೆಯಡಿ ಬಂಧಿಸಿದ್ದಾರೆ. ಆರೋಪಿ ಯಾಸಿನ್‌ ಕೆಲ ಸಮಯದಿಂದ 14ರ ಹರೆಯದ ಹಿಂದು ಬಾಲಕಿಯನ್ನು ಪ್ರೀತಿಸುವಂತೆ ಬಲವಂತಪಡಿಸಿ ಲೈಂಗಿಕವಾಗಿ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಎಂದು ಪ್ರಕರಣ ದಾಖಲಾಗಿದೆ.





























































































































































































































error: Content is protected !!
Scroll to Top