Saturday, October 1, 2022
spot_img
Homeಸ್ಥಳೀಯ ಸುದ್ದಿಮಳೆ ಹಾನಿ ಪ್ರದೇಶಗಳಿಗೆ ಸುನೀಲ್‌ ಕುಮಾರ್‌ ಭೇಟಿ

ಮಳೆ ಹಾನಿ ಪ್ರದೇಶಗಳಿಗೆ ಸುನೀಲ್‌ ಕುಮಾರ್‌ ಭೇಟಿ

ವಿಕೋಪ ನಿರ್ವಹಣೆಗೆ ಸನ್ಧದ್ಧವಾಗಿರುವಂತೆ ಅಧಿಕಾರಿಗಳಿಗೆ ಸೂಚನೆ

ಕಾರ್ಕಳ : ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಕ್ಷೇತ್ರದ ಶಾಸಕ, ಸಚಿವ ಸುನಿಲ್ ಕುಮಾರ್ ಗುರುವಾರ ಭೇಟಿ ನೀಡಿ, ಪರಿಶೀಲಿಸಿದರು.

ಹಾನಿಗೀಡಾಗಿರುವ ಹೆಬ್ರಿ ತಾಲೂಕು ಅಂಡಾರು ಗ್ರಾಮದ ಪೈಥಾಳ ಎಂಬಲ್ಲಿನ ಸಂಪರ್ಕ ಸೇತುವೆ, ಸಾಣೂರು ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು ಬಳಿ ಭೂ ಕುಸಿತವಾದ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸ್ಥಳೀಯರೊಂದಿಗೆ ಮಾಹಿತಿ ಪಡೆದರು. ಮಳೆಯಿಂದ ಹಾನಿಯಾದ ಪ್ರದೇಶಗಳಲ್ಲಿ ತುರ್ತು ದುರಸ್ತಿ ಹಾಗೂ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವರು ಮಳೆ ಹಾನಿ ಮತ್ತು ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಸರ್ವ ರೀತಿಯಲ್ಲೂ ಸನ್ನದ್ಧರಾಗಿರುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!