Saturday, October 1, 2022
spot_img
Homeಸ್ಥಳೀಯ ಸುದ್ದಿಜು. 9 : ಜ್ಯೋತಿ ಪೈ ಅವರಿಗೆ ಅಭಿನಂದನಾ ಕಾರ್ಯಕ್ರಮ

ಜು. 9 : ಜ್ಯೋತಿ ಪೈ ಅವರಿಗೆ ಅಭಿನಂದನಾ ಕಾರ್ಯಕ್ರಮ

ಕಾರ್ಕಳ : ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ರಾಜ್ಯ ಸಂಸ್ಥೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ, ಉಡುಪಿ ಜಿಲ್ಲಾ ಗೈಡ್‌ ಕಮಿಷನರ್‌ ರಾಜ್ಯ ಸಂಸ್ಥೆ ವತಿಯಿಂದ ಜ್ಯೋತಿ ಜೆ. ಪೈ ಅವರಿಗೆ ಅಭಿನಂದನಾ ಸಮಾರಂಭ ಶ್ರೀಮದ್‌ ಭುವನೇಂದ್ರ ಪ್ರೌಢಶಾಲೆಯಲ್ಲಿ ಜು. 9ರಂದು ಬೆಳಿಗ್ಗೆ 10:30ಕ್ಕೆ ನಡೆಯಲಿದೆ. ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಂ.ಕೆ. ವಿಜಯ ಕುಮಾರ್‌ ಅಧ್ಯಕ್ಷತೆ ವಹಿಸಲಿದ್ದು, ಸಚಿವ ವಿ. ಸುನೀಲ್‌ ಕುಮಾರ್‌, ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್‌ ಆಳ್ವ, ಸ್ಕೌಟ್ಸ್‌ ಮತ್ತು ಗೈಡ್ಸ್ ಸಹಾಯಕ ಜಿಲ್ಲಾ ಆಯುಕ್ತ ಪಿ. ಶ್ರೀಧರ ಆಚಾರ್‌, ಉಡುಪಿ ಜಿಲ್ಲಾ ಮುಖ್ಯ ಆಯುಕ್ತೆ ಶಾಂತಾ ವಿ. ಆಚಾರ್‌, ಉಪಾಧ್ಯಕ್ಷ ಎಡ್ವಿನ್‌ ಆಳ್ವ, ಜಿಲ್ಲಾ ಸ್ಕೌಟ್‌ ಆಯುಕ್ತ ಡಾ. ವಿಜಯೇಂದ್ರ ವಸಂತ್‌ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್‌ ಜಿ. ನಾಯಕ್‌, ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್‌ ಎಂ.ಎನ್‌., ಸಂಚಾಲಕ ನಿತ್ಯಾನಂದ ಪೈ, ಶಾಲಾ ಮುಖ್ಯಶಿಕ್ಷಕಿ ವೃಂದಾ ಶೆಣೈ, ಆನಂದ ದೇವಾಡಿಗ, ಸಾವಿತ್ರಿ ಮನೋಹರ್‌, ಕೊಗ್ಗ ಗಾಣಿಗ ಮತ್ತು ಜಗದೀಶ್‌ ಹೆಗ್ಡೆ ಭಾಗವಹಿಸಲಿರುವರು ಎಂದು ಶಾಲಾ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

error: Content is protected !!