Friday, August 19, 2022
spot_img
Homeಸುದ್ದಿಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಹತ್ಯೆ

ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಹತ್ಯೆ

ಟೋಕ್ಯೊ: ಜಪಾನಿನ ಮಾಜಿ ಪ್ರಧಾನ ಮಂತ್ರಿ ಶಿಂಜೊ ಅಬೆಯನ್ನು ದುಷ್ಕರ್ಮಿಯೊಬ್ಬ ಇಂದು ಬೆಳಗ್ಗೆ ಗುಂಡಿಕ್ಕಿ ಸಾಯಿಸಿದ್ದಾನೆ.ನಾರಾ ಪ್ರಾಂತ್ಯದಲ್ಲಿ ಚುನಾವಣೆ ಪ್ರಚಾರ ಮಾಡುತ್ತಿರುವಾಗ ಶಿಂಜೊ ಅಬೆಯ ಮೇಲೆ ಹತ್ಯೆಯಾಗಿದೆ. ಶಂಕಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಿಂಜೊ ಅಬೆಗೆ ಹಿಂದಿನಿಂದ ಗುಂಡು ಹಾರಿಸಲಾಗಿದೆ. ಗುಂಡು ಬೆನ್ನಿನ ಮೂಲಕ ಎದೆಗೆ ಭಾಗಕ್ಕೆ ಅಪ್ಪಳಿಸಿ ಶಿಂಜೊ ಅಬೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ಸಾಗಿಸಿದರೂ ಬದುಕುಳಿಯಲಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಶಿಂಜೊ ಅಬೆ ಪ್ರಧಾನಿಯಾಗಿದ್ದಾಗ ಭಾರತ ಮತ್ತು ಜಪಾನ್‌ ಸಂಬಂಧ ಬಹಳ ಸುಧಾರಿಸಿತ್ತು. ಅವರನ್ನು ಭಾರತದ ಮಿತ್ರ ಪ್ರಧಾನಿ ಎಂದು ಕರೆಯುತ್ತಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!