ಬಕ್ರೀದ್‌ ಹಬ್ಬಕ್ಕೆ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಬಕ್ರೀದ್‌ ಹಬ್ಬದ ಸಾಮೂಹಿಕ ಪ್ರಾರ್ಥನೆ ವೇಳೆ ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸರಕಾರದ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಜು.10ರಂದು ಆಚರಿಸಲ್ಪಡುವ ಬಕ್ರೀದ್‌ ಹಬ್ಬಕ್ಕಾಗಿ ಸರಕಾರ ಇಂದು ಮಾರ್ಗಸೂಚಿ ಬಿಡುಗಡೆಗೊಳಿಸಿದೆ.
ಹಬ್ಬದ ಪ್ರಮುಖ ಅಂಗವಾಗಿರುವ ಖುರ್ಬಾನಿ ನೆರವೇರಿಸುವಾಗ ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಾರ್ವತ್ರಿಕ ಅಧಿನಿಯಮ-2020 ಉಲ್ಲಂಘನೆಯಾಗಬಾರದು. ಸಾರ್ವಜನಿಕ ಪ್ರದೇಶ, ರಸ್ತೆ, ಶಾಲಾ ಕಾಲೇಜು, ಆಸ್ಪತ್ರೆ ಆವರಣಗಳಲ್ಲಿ ಖುರ್ಬಾನಿ ನೆರವೇರಿಸಲು ಅವಕಾಶವಿಲ್ಲ. ಸ್ಥಳೀಯಾಡಳಿಗಳು ನಿಗದಿಪಡಿಸುವ ಸ್ಥಳಗಳಲ್ಲಿ ಮಾತ್ರ ಖುರ್ಬಾನಿ ನೆರವೇರಿಸಬೇಕು ಮತ್ತು ಸ್ವಚ್ಛತೆ ಹಾಗೂ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಪ್ರಾಣಿಗಳ ತ್ಯಾಜ್ಯವನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿಲೇವಾರಿ ಮಾಡಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಬಕ್ರೀದ್‌ ಹಬ್ಬದಲ್ಲಿ ಗೋ ಹತ್ಯೆ ಮಾಡಬಾರದು ಎಂದು ಎರಡು ದಿನ ಮೊದಲೇ ಪಶುಸಂಗೋಪನಾ ಸಚಿವಾಲಯ ಕಟ್ಟುನಿಟ್ಟಿನ ಆದೇಶ ನೀಡಿದೆ.













































































































































































error: Content is protected !!
Scroll to Top