ಕಾರ್ಕಳ : ಮೂಡಬಿದ್ರೆ ಕಾರ್ಕಳ ರಸ್ತೆಯ ಚಿಲಿಂಬಿಯಲ್ಲಿ ಕಾರೊಂದು ಅಪಘಾತಕ್ಕೀಡಾಗಿದೆ. ಕಾರ್ಕಳದಿಂದ ಸಾಣೂರು ಕಡೆ ಸಾಗುತ್ತಿದ್ದ ಸ್ವಿಫ್ಟ್ ಕಾರೊಂದು ಚಿಲಿಂಬಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಧರೆಗೆ ಢಿಕ್ಕಿಯಾಗಿದೆ. ಪರಿಣಾಮ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.
ಅಪಘಾತ ವಲಯ
ಚಿಲಿಂಬಿ ತಿರುವಿನಲ್ಲಿ ಹಲವಾರು ಬಾರಿ ಅಪಘಾತ ಸಂಭವಿಸಿದೆ. ಮಳೆಗಾಲದಲ್ಲಿ ಈ ಪರಿಸರದಲ್ಲಿ ಹೆಚ್ಚಿನ ಅಪಘಾತ ಸಂಭವಿಸುತ್ತಿದ್ದು, ಚಾಲಕರು, ದ್ವಿಚಕ್ರ ಸವಾರರು ಎಚ್ಚರಿಕೆ, ಬಹಳ ಜಾಗರೂಕತೆಯಿಂದ ವಾಹನ ಚಲಾಯಿಸುವುದು ಒಳಿತು. ಜು. 5ರಂದು ಕಾರೊಂದು ಪಲ್ಟಿಯಾಗಿ ಕಂದಕಕ್ಕೆ ಉರುಳಿದೆ.