ಕಾರ್ಕಳ: ಕಾರ್ಕಳ ತಾಲೂಕಿನ ಸಾಣೂರು ಗ್ರಾಮದಲ್ಲಿ ಸಂಗ್ರಹಿಸಿಟ್ಟಿದ್ದ ದನದ ಮಾಂಸವನ್ನು ಇಂದು ರಾತ್ರಿ (ಶುಕ್ರವಾರ) ವಶಪಡಿಸಿಕೊಂಡಿರುವ ಪೊಲೀಸರು ಜತೆಗೆ ವಧಿಸಲೆಂದು ಕಟ್ಟಿ ಹಾಕಿದ್ದ ಎರಡು ದನಗಳನ್ನು ರಕ್ಷಿಸಿದ್ದಾರೆ. ಕಾರ್ಕಳ ನಗರ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಸಾಣೂರು ಗ್ರಾಮದ ಫಾರೂಕ್ ಎಂಬವರ ಮನೆಯಿಂದ ಫ್ರಿಡ್ಜ್ ನಲ್ಲಿ ಇರಿಸಲಾಗಿದ್ದ ಸುಮಾರು 25 ಕೆಜಿಗಳಷ್ಟು ದನದ ಮಾಂಸ ಹಾಗೂ ಮಾಂಸ ಮಾಡುವ ಉದ್ದೇಶದಿಂದ ಕಟ್ಟಿ ಹಾಕಿದ್ದ ಎರಡು ದನಗಳನ್ನು ಖಚಿತ ಮಾಹಿತಿ ಮೇರೆಗೆ ಕಾರ್ಕಳ ನಗರ ಠಾಣೆಯ ಉಪ ನಿರೀಕ್ಷಕ ಪ್ರಸನ್ನ ಹಾಗೂ ಕಾರ್ಕಳ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಫಾರೂಕ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಭಾನುವಾರದ ಬಕ್ರೀದ್ ಹಬ್ಬದ ದಿನ ವಧಿಸಲೆಂದು ದನಗಳನ್ನು ತರಲಾಗಿತ್ತು ಎನ್ನಲಾಗಿದೆ.