ಕಾರ್ಕಳ : ತಾಲೂಕಿನ ವಿವಿಧ ಗ್ರಾ. ಪಂ. ಗಳ ಫಲಾನುಭವಿಗಳಿಗೆ ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜು. 9 ರಂದು ಮಧ್ಯಾಹ್ನ ಗಂಟೆ 12ರಿಂದ ಹಕ್ಕುಪತ್ರ ವಿತರಣೆ ನಡೆಯಲಿದೆ. ಸಚಿವ ವಿ. ಸುನೀಲ್ ಕುಮಾರ್ ಅವರು ಹಕ್ಕುಪತ್ರ ಹಸ್ತಾಂತರ ಮಾಡಲಿರುವರು. ಮಿಯ್ಯಾರು – 10 ಕುಟುಂಬಕ್ಕೆ, ಕುಕ್ಕುಂದೂರು – 10, ಕಾರ್ಕಳ ಕಸಬಾ – 27, ಕಲ್ಯಾ – 12, ನೀರೆ – 8, ಯರ್ಲಪಾಡಿ 10, ಮರ್ಣೆ – 8 ಮತ್ತು ಶಿರ್ಲಾಲು ಗ್ರಾಮದ 15 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯಾಗಲಿದೆ.
- Tags
- News karkala
Previous articleಚಿಲಿಂಬಿಯಲ್ಲಿ ಕಾರು ಅಪಘಾತ