Homeಸುದ್ದಿಬಾಗಲಕೋಟೆ ಜಿಲ್ಲೆಯಲ್ಲಿ ಹಿಂಸಾಚಾರ, ಕರ್ಫ್ಯೂ ಜಾರಿ

Related Posts

ಬಾಗಲಕೋಟೆ ಜಿಲ್ಲೆಯಲ್ಲಿ ಹಿಂಸಾಚಾರ, ಕರ್ಫ್ಯೂ ಜಾರಿ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಎಂಬಲ್ಲಿ ಬುಧವಾರ ಸಂಜೆ ಹಿಂಸಾಚಾರ ನಡೆದು, ನಾಲ್ವರು ಗಾಯಗೊಂಡಿದ್ದಾರೆ. 5 ಅಂಗಡಿ ಧ್ವಂಸವಾಗಿದ್ದು, 10 ತಳ್ಳುಗಾಡಿ ಮತ್ತು ಮೋಟಾರ್‌ ಸೈಕಲ್‌ಗಳಿಗೆ ಬೆಂಕಿ ಹಚ್ಚಲಾಗಿದೆ ಪರಿಸ್ಥಿತಿ ಕೈಮೀರದಂತೆ, ಶುಕ್ರವಾರ ಬೆಳಗ್ಗೆ 8 ಗಂಟೆ ತನಕ ಸೆಕ್ಷನ್‌ 144 ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಡಳಿತದ ತಿಳಿಸಿದೆ.
ಕೆರೂರು ಪಟ್ಟಣದಲ್ಲಿ ಬುಧವಾರ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ ಕಾರಣ, ನಾಳೆ ತನಕ ಯಾವುದೇ ಸಭೆ ಸಮಾರಂಭ, ಜಾಥಾ, ಮೆರವಣಿಗೆ ನಡೆಸದಂತೆ ಜಿಲ್ಲಾಡಳಿತ ಆದೇಶ ನೀಡಿದೆ. ಈ ಘರ್ಷಣೆ ಸಂಬಂಧ 4 ಎಫ್‌ಐಆರ್‌ ದಾಖಲಿಸಿ, 18ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ದಾಳಿಯ ನಂತರ ಏಳು ತಳ್ಳುವ ಗಾಡಿಗಳು ಮತ್ತು ಮೋಟಾರ್‌ಸೈಕಲ್‌ಗೆ ಬೆಂಕಿ ಹಚ್ಚಲಾಗಿದೆ. ಎರಡು ಗುಂಪುಗಳ ಸದಸ್ಯರ ನಡುವಿನ ಘರ್ಷಣೆಯಲ್ಲಿ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ. ಇಬ್ಬರ ನಡುವಿನ ಗಲಾಟೆ, ಹಿಂಸಾತ್ಮಕ ಘರ್ಷಣೆ ನಂತರದಲ್ಲಿ ಹಿಂಸಾಚಾರದ ರೂಪ ತಳೆಯಿತು.
ಘರ್ಷಣೆಯ ವೇಳೆ ಪರಸ್ಪರರು ನಡೆಸಿದ ದಾಳಿಗೆ ಏಳು ತಳ್ಳುವ ಗಾಡಿಗಳು ಮತ್ತು ಮೋಟಾರ್ ಸೈಕಲ್ ಸುಟ್ಟು ಹಾಕಲಾಗಿದೆ. ಎರಡೂ ಕಡೆಯಿಂದ ಭಾರಿ ಕಲ್ಲು ತೂರಾಟ ನಡೆದಿದೆ. ಅಂಗಡಿಗಳು ಮತ್ತು ವಾಹನಗಳನ್ನು ಧ್ವಂಸವಾಗಿವೆ.
ಪೊಲೀಸರು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿದ ಕಾರಣ, ಪರಿಸ್ಥಿತಿ ಹತೋಟಿಗೆ ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶುಕ್ರವಾರದವರೆಗೆ ಬೃಹತ್ ಸಮಾವೇಶಗಳನ್ನು ನಿಷೇಧಿಸಲಾಗಿದೆ. ನಾಳೆ ಶಾಲಾ-ಕಾಲೇಜುಗಳನ್ನು ಮುಚ್ಚಲು ಸೂಚಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.
ಗಲಾಟೆ ಶುರುವಾಗಿದ್ದು ಹೇಗೆ?
ಕೆರೂರು ಬಸ್‌ನಿಲ್ದಾಣದಲ್ಲಿ ಸಂಜೆ 6 ಗಂಟೆಗೆ ಒಂದು ಸಮುದಾಯದ ಯುವಕರು ಮತ್ತೊಂದು ಸಮುದಾಯದ ವ್ಯಕ್ತಿಯನ್ನು ಥಳಿಸಿದ್ದಾರೆ. ಇದರ ಸೇಡು ತೀರಿಸಿಕೊಳ್ಳಲು ಆ ವ್ಯಕ್ತಿ ತನ್ನ ಸಹಚರರನ್ನೂ ಕರೆತಂದಾಗ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಜಗಳದ ನಂತರ ವಿವಿಧೆಡೆ ಬೆಂಕಿ ಹಚ್ಚಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!