Saturday, October 1, 2022
spot_img
Homeಸುದ್ದಿಬಕ್ರೀದ್‌ ದಿನ ಗೋ ಹತ್ಯೆ ತಡೆಯಲು ಸೂಚನೆ

ಬಕ್ರೀದ್‌ ದಿನ ಗೋ ಹತ್ಯೆ ತಡೆಯಲು ಸೂಚನೆ

ಬೆಂಗಳೂರು: ಬಕ್ರೀದ್‌ ದಿನ ಗೋವುಗಳನ್ನು ಹತ್ಯೆ ಮಾಡುವುದನ್ನು ತಡೆಯಲು ಗೋ ಹತ್ಯೆ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರಕಾರ ಸೂಚಿಸಿದೆ.
ಈ ಕುರಿತು ಮಾತನಾಡಿರುವ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ, ಹೊರ ರಾಜ್ಯಗಳಿಂದ ಗೋವುಗಳನ್ನು ತಂದು ವಧಿಸುವುದನ್ನು ತಡೆಯಬೇಕು. ಗೋಮಾಂಸ ಸಾಗಿಸುವವರ ಮೇಲೆ ಹದ್ದಿನ ಕಣ್ಣಿಡಬೇಕು. ಗೋ ಹತ್ಯೆ ನಿಷೇಧ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಸಲುವಾಗಿ ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಗೋ ಹತ್ಯೆ ಮಾಡುವುದು ಅಥವಾ ಗೋವು ಅಕ್ರಮ ಸಾಗಾಟ ಕಂಡುಬಂದರೆ ಪೊಲೀಸರಿಗೆ ದೂರು ನೀಡಬೇಕು. ಗೋ ಹತ್ಯೆ ತಡೆಯದ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!