Sunday, October 2, 2022
spot_img
Homeಸುದ್ದಿಹಿಂದು ದೇವರಿಗೆ ಮತ್ತೆ ಅಪಚಾರ ಎಸಗಿದ ಮಣಿಮೇಖಲೈ

ಹಿಂದು ದೇವರಿಗೆ ಮತ್ತೆ ಅಪಚಾರ ಎಸಗಿದ ಮಣಿಮೇಖಲೈ

ಶಿವ, ಪಾರ್ವತಿ ಸಿಗರೇಟು ಸೇದುತ್ತಿರುವ ಫೋಟೊ ಅಪ್‌ಲೋಡ್‌

ಹೊಸದಿಲ್ಲಿ: ಕಾಳಿ ಮಾತೆಯ ಬಾಯಲ್ಲಿ ಸಿಗರೇಟು, ಕೈಯಲ್ಲಿ ಸಲಿಂಗ ಕಾಮಿಗಳ ಧ್ವಜವಿರುವ ಸಾಕ್ಷ್ಯಚಿತ್ರದ ಪೋಸ್ಟರ್‌ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ವಿಕೃತಿ ಮೆರೆದಿದ್ದ ನಿರ್ದೇಶಕಿ ಮಣಿಮೇಖಲೈ ಈ ಕೃತ್ಯಕ್ಕೆ ಹಿಂದುಳಿಂದ ವ್ಯಕ್ತವಾದ ವಿರೋಧವನ್ನೂ ಲೆಕ್ಕಿಸದೆ ಇಂದು ಮತ್ತೆ ಇನ್ನೊಂದು ಚಿತ್ರವನ್ನು ಹಂಚಿಕೊಂಡು ಉದ್ಧಟತನ ಮೆರೆದಿದ್ದಾರೆ.
ಶಿವ ಮತ್ತು ಪಾರ್ವತಿ ವೇಷಧಾರಿಗಳು ಧೂಮಪಾನ ಮಾಡುತ್ತಿರುವ ಫೋಟೊಗಳನ್ನು ಮಣಿಮೇಖಲೈ ಇಂದು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಹಿಂದುಗಳ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸಿದ್ದು, ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ನಿರ್ದೇಶಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆನಡದಲ್ಲಿರುವ ತಮಿಳುನಾಡು ಮೂಲದ ಈ ಕಿರುಚಿತ್ರ ನಿರ್ದೇಶಕಿ ಹಿಂದು ದೇವತೆಗಳಿಗೆ ಅಪಚಾರ ಎಸಗುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ. ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಕೆಲವರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!