Homeಜಿಲ್ಲಾಕೊಡಗು : ಚೆಂಬು ಗ್ರಾಮದ ಸಂತ್ರಸ್ತ ಮನೆಗಳಿಗೆ ರೂ. 5 ಲಕ್ಷ ಪರಿಹಾರ : ಆರ್‌....

Related Posts

ಕೊಡಗು : ಚೆಂಬು ಗ್ರಾಮದ ಸಂತ್ರಸ್ತ ಮನೆಗಳಿಗೆ ರೂ. 5 ಲಕ್ಷ ಪರಿಹಾರ : ಆರ್‌. ಅಶೋಕ್

ಕೊಡಗು : ರಾಜ್ಯದಾದ್ಯಂತ ಎಡೆಬಿಡದೇ ಸುರಿಯುತ್ತಿರುವ ಮಹಾಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ತಲಾ ರೂ. 5ಲಕ್ಷ ಪರಿಹಾರ ಮತ್ತು ಮನೆಗೆ ಹಾನಿಯಾಗಿದ್ದರೆ ರೂ. 50 ಸಾವಿರ ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.‌ ಅಶೋಕ್‌ ಘೋಷಿಸಿದ್ದಾರೆ.


ಸರಣಿ ಭೂಕಂಪನದ ಕೇಂದ್ರ ಬಿಂದು ಮಡಿಕೇರಿ ತಾಲೂಕಿನ ಚೆಂಬು ಗ್ರಾಮಕ್ಕೆ ಭೇಟಿ ನೀಡಿದ ಅವರು ಸಂತ್ರಸ್ತರೊಂದಿಗೆ ಚರ್ಚಿಸಿ, ಸಮಸ್ಯೆಗಳಿಗೆ ನೆರವಾಗುವುದಾಗಿ ಭರವಸೆ ನೀಡಿದರು. ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತಿದ್ದು ಮುಂದಿನ ದಿನಗಳಲ್ಲಿ ತಜ್ಞರ ಸಲಹೆಯಂತೆಯೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಸೂಕ್ತ. ನಿಯಮ ಬಾಹಿರ ರೆಸಾರ್ಟ್‌ ಮತ್ತು ಹೋಂಸ್ಟೇಗಳ ನಿರ್ಮಾಣದ ಕುರಿತು ನಿಗಾ ವಹಿಸುವ ಅಗತ್ಯವಿದೆ ಎಂದರು.

LEAVE A REPLY

Please enter your comment!
Please enter your name here

Latest Posts

error: Content is protected !!