ಕಾರ್ಕಳ : ಮಟನ್‌ ಸ್ಟಾಲ್‌ ಬಳಿಯ ದೊಡ್ಡಿಯಿಂದ 9 ಆಡುಗಳ ಕಳವು

ಕಾರ್ಕಳ : ಕಸಬಾ ಗ್ರಾಮದ ಜೋಡುರಸ್ತೆಯಲ್ಲಿರುವ ಅಶ್ಫಕ್‌ ಅಹ್ಮದ್‌ ಎಂಬವರಿಗೆ ಸೇರಿದ ಮಟನ್‌ ಸ್ಟಾಲ್ ನ ದೊಡ್ಡಿಯಲ್ಲಿ ಕಟ್ಟಿದ್ದ 9 ಆಡುಗಳು ಕಳ್ಳತನವಾಗಿದೆ. 30 ವರ್ಷಗಳಿಂದ ಮಟನ್‌ ಸ್ಟಾಲ್‌ ನಡೆಸುತ್ತಿರುವ ಅಶ್ಪಕ್‌ ಅವರು ಮಾಂಸ ಮಾಡಲು ಬೇಕಾದಂತಹ ಆಡು ಮತ್ತು ಕುರಿಗಳ ದೊಡ್ಡಿಯನ್ನು ಅಂಗಡಿಯ ಹತ್ತಿರದಲ್ಲಿ ಮಾಡಿದ್ದರು. ದೊಡ್ಡಿಯಲ್ಲಿ ಒಟ್ಟು 24 ಆಡು ಹಾಗೂ 6 ಕುರಿಗಳಿದ್ದವು. ಮಂಗಳವಾರ ಕೆಲಸ ಮುಗಿಸಿ ಸಂಜೆ 7 ಗಂಟೆಯ ಹೊತ್ತಿಗೆ ಅಂಗಡಿ ಬಂದ್ ಮಾಡಿ ಆಡು ಹಾಗೂ ಕುರಿಗಳ ದೊಡ್ಡಿಗೆ ಬೀಗ ಹಾಕಲಾಗಿತ್ತು. ಬುಧವಾರ ಬೆಳಿಗ್ಗೆ ದೊಡ್ಡಿಯನ್ನು ನೋಡಿದಾಗ ದೊಡ್ಡಿಗೆ ಹಾಕಿದ ಬೀಗವನ್ನು ಒಡೆದು, ಬಾಗಿಲು ತೆರೆದಿದ್ದು 9 ಆಡುಗಳು ಕಳವಾಗಿರುವುದು ಕಂಡುಬಂದಿದೆ. ಕಳವಾದ ಆಡಿನ ಮೌಲ್ಯ 1,49,000 ಆಗಿರುತ್ತದೆ. ಜುಲೈ 10ರಂದು ಬಕ್ರೀದ್‌ ಹಬ್ಬ. ಹಬ್ಬಕ್ಕೆ 4 ದಿನ ಮುಂಚಿತವಾಗಿ ಆಡು ಕಳವಾಗಿದೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.





























































































































































































































error: Content is protected !!
Scroll to Top