Sunday, October 2, 2022
spot_img
Homeಸ್ಥಳೀಯ ಸುದ್ದಿಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ 70ನೇ ಜನ್ಮ ದಿನಾಚರಣೆ

ಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ 70ನೇ ಜನ್ಮ ದಿನಾಚರಣೆ

ಗೋಪಾಲ ಭಂಡಾರಿ ಅವರ ಬದುಕು ಯುವ ಜನತೆಗೆ ಆದರ್ಶ- ಶುಭದರಾವ್

ಕಾರ್ಕಳ : ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅವರ ಬದುಕು ಯುವ ಜನತೆಗೆ ಆದರ್ಶವಾದುದು. ಅವರು‌ ತಮ್ಮ ಬದುಕಿನಲ್ಲಿ ಪಾಲಿಸಿಕೊಂಡು ಬಂದಿರುವ ಪ್ರಾಮಾಣಿಕತೆ, ಸರಳತೆ, ಸಮಾನತೆ ಕುರಿತು ಯುವಪೀಳಿಗೆಗೆ ತಿಳಿಸಿಕೊಡುವ ಕಾರ್ಯವಾಗಬೇಕು ಎಂದು ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ವಕ್ತಾರ, ಪುರಸಭೆ ಸದಸ್ಯ ಶುಭದ ರಾವ್ ಅಭಿಪ್ರಾಯಪಟ್ಟರು.

ಅವರು ಗುರುವಾರ ಸಾಯಿಗೇಮ್ ಕ್ಲಬ್ ಅಯ್ಯಪ್ಪನಗರ ವತಿಯಿಂದ ಕುಕ್ಕುಂದೂರು ವಿಜೇತ ವಿಶೇಷ ಶಾಲೆಯಲ್ಲಿ ಹಮ್ಮಿಕೊಂಡ ಗೋಪಾಲ್ ಭಂಡಾರಿಯವರ 70 ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಂಡಾರಿ ಅವರಂತ ಮೇರು ವ್ಯಕ್ತಿತ್ವದ ನಾಯಕರು ನಮಗೆ ಶಾಸಕರಾಗಿದದ್ದು ನಮ್ಮ ಅದೃಷ್ಟ. ಈ ಕ್ಷೇತ್ರಕ್ಕೆ ಅವರ ಸೇವೆ ಇನ್ನೂ ಅನಿವಾರ್ಯವಾಗಿತ್ತು, ದುರಾದೃಷ್ಟವಶಾತ್ ಅವರು ನಮ್ಮೊಂದಿಗಿಲ್ಲ. ಅವರು ತೋರಿದ ಹಾದಿಯಲ್ಲಿ ನಾವು ಮುಂದುವರಿಯಬೇಕೆಂದರು.
ಸಾಯಿಗೇಮ್ಸ್ ಕ್ಲಬ್‌ನ ಸಯೀಮ್ ಅಯಪ್ಪನಗರ, ನಿಶಾನ್ ಶೆಟ್ಟಿ, ಪ್ರಶಾಂತ್ ಗುರುಪ್ರಸಾದ್ ಉಪಸ್ಥಿತರಿದ್ದರು. ಶಾಲೆಯ ಸಂಸ್ಥಾಪಕಿ ಕಾಂತಿ ಹರೀಶ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!