ಪಂಜಿಕಲ್ಲು ಗುಡ್ಡ ಕುಸಿತ: ಮೃತರ ಸಂಖ್ಯೆ ಮೂರಕ್ಕೇರಿಕೆ

ಬಂಟ್ವಾಳ : ಬಂಟ್ವಾಳದಲ್ಲಿ ನಿನ್ನೆ ರಾತ್ರಿ ಶೆಡ್‌ ಮೇಲೆ ಗುಡ್ಡ ಜರಿದು ಬಿದ್ದು ಸಂಭವಿಸಿದ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ ಮೂರಕ್ಕೇರಿದೆ.


ಬಂಟ್ವಾಳದ ಪಂಜಿಕಲ್ಲು ಗ್ರಾಮದ ಮುಕ್ಕುಡದಲ್ಲಿ ಹೆನ್ರಿ ಕಾರ್ಲೊ ಎಂಬವರ ಶೆಡ್‌ ಮೇಲೆ ಬುಧವಾರ ರಾತ್ರಿ ಮಳೆಯಿಂದಾಗಿ ಗುಡ್ಡ ಕುಸಿದು ಬಿದ್ದಿದೆ. ಮನೆ ಬಳಿಯ ಶೆಡ್‌ನಲ್ಲಿ ಅವರ ನಾಲ್ವರು ಕಾರ್ಮಿಕರು ವಾಸವಾಗಿದ್ದರು. ಈ ಪೈಕಿ ಓರ್ವ ಮಣ್ಣಿನಡಿ ಸಿಲುಕಿ ನಿನ್ನೆ ರಾತ್ರಿಯೇ ಮೃತಪಟ್ಟಿದ್ದರು. ಇನ್ನಿಬ್ಬರು ಮಧ್ಯರಾತ್ರಿ ಸಾವಿಗೀಡಾಗಿದ್ದಾರೆ. ಮಣ್ಣಿನ ರಾಶಿಯಡಿ ಸಿಲುಕಿದ್ದ ಮೂವರನ್ನು ಜೆಸಿಬಿ ಬಳಸಿ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಇಬ್ಬರು ಚಿಕಿತ್ಸೆ ಫಲ ನೀಡದೆ ಆಸ್ಪತ್ರೆಯಲ್ಲಿ ತೀರಿಕೊಂಡಿದ್ದಾರೆ. ಇನ್ನೋರ್ವ ಚೇತರಿಸಿಕೊಳ್ಳುತ್ತಿದ್ದಾರೆ.
ಕೇರಳದ ಪಾಲಕ್ಕಾಡು ಮೂಲದ ವಿಜು (45) ಸ್ಥಳದಲ್ಲೇ ಮೃತಪಟ್ಟವರು.ಕೋಟ್ಟೆಯಂ ನಿವಾಸಿ ಬಾಬು (45) ಮತ್ತು ಆಲಪುಳ ನಿವಾಸಿ ಸಂತೋಷ್‌ ಎಂಬವರು (45) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಣ್ಣೂರಿನ ಜಾನಿ (44) ಎಂಬವರು ಬಂಟ್ವಾಳ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.error: Content is protected !!
Scroll to Top