Wednesday, August 17, 2022
spot_img
Homeಸ್ಥಳೀಯ ಸುದ್ದಿರಸ್ತೆಯಲ್ಲಿ ತುಂಬಿದ ನೀರು - ಹಲವು ಮನೆಗಳ ಸಂಪರ್ಕ ಕಡಿತ

ರಸ್ತೆಯಲ್ಲಿ ತುಂಬಿದ ನೀರು – ಹಲವು ಮನೆಗಳ ಸಂಪರ್ಕ ಕಡಿತ

ಕಾರ್ಕಳ : ಪುರಸಭಾ ವ್ಯಾಪ್ತಿಯ 12ನೇ ವಾರ್ಡ್‌ನ ಜೋಡುರಸ್ತೆ ಮೂರನೇ ಅಡ್ಡರಸ್ತೆಯಲ್ಲಿ ನೀರು ತುಂಬಿ ಈ ಭಾಗದ ಮನೆಗಳ ಸಂಪರ್ಕ ಕಡಿತಗೊಂಡಿದೆ. ಕಳೆದ 5 ದಿನಗಳಿಂದ ಇಲ್ಲಿನ ಪರಿಸ್ಥಿತಿ ಹೀಗಿದ್ದು, ಹಲವು ಮನೆಗಳಿಗೆ ಸಂಪರ್ಕ ಕಷ್ಟವಾಗಿದೆ. ರಸ್ತೆಯ ಒಂದು ಬದಿ ಖಾಸಗಿಯವರು ಲೇಔಟ್‌ ಮಾಡಿದ್ದು, ಕಾಂಪೌಂಡು ನಿರ್ಮಿಸಿರುವುದರಿಂದ ನೀರು ಸರಾಗವಾಗಿ ಹರಿದು ಹೋಗದೇ ರಸ್ತೆಯಲ್ಲೇ ನಿಲ್ಲುವಂತಾಗಿದೆ. ಸುಮಾರು 20 ಮೀಟರ್‌ ವ್ಯಾಪ್ತಿಯಲ್ಲಿ 2 ರಿಂದ 3 ಅಡಿಯಷ್ಟು ನೀರು ನಿಂತಿದೆ. ಕಾರ್ಕಳ ಪುರಸಭೆ ಮತ್ತು ಮಿಯ್ಯಾರು ಪಂಚಾಯತ್‌ ಗಡಿ ಪ್ರದೇಶವಾಗಿರುವ ಕಾರಣ ಸಮಸ್ಯೆಗೆ ಒಂದು ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿದೆ.

ಮನವಿ
ರಸ್ತೆಯಲ್ಲಿ ನೀರು ನಿಲ್ಲದಂತೆ ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ಸ್ಥಳೀಯರು ಕಾರ್ಕಳ ತಹಶೀಲ್ದಾರ್‌, ತಾಲೂಕು ಪಂಚಾಯತ್‌ ಇಒ ಹಾಗೂ ಪುರಸಭೆಗೆ ಮನವಿ ಮಾಡಿಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗಮನಹರಿಸುವುದು ಅತಿ ಅಗತ್ಯ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!