Homeಸುದ್ದಿಡೋಲೊ 650 ಮಾತ್ರೆ ಕಂಪನಿ ಮೇಲೆ ಐಟಿ ದಾಳಿ

Related Posts

ಡೋಲೊ 650 ಮಾತ್ರೆ ಕಂಪನಿ ಮೇಲೆ ಐಟಿ ದಾಳಿ

ಬೆಂಗಳೂರು:ಜ್ವರಕ್ಕೆ ತಕ್ಷಣ ರಿಲೀಫ್‌ ನೀಡುವ ಮೂಲಕ ದೇಶಾದ್ಯಂತ ಬಹಳ ಜನಪ್ರಿಯವಾಗಿರುವ ಡೋಲೊ 650 ಮಾತ್ರೆ ತಯಾರಿಸುವ ಬೆಂಗಳೂರಿನ ಮೈಕ್ರೋ ಲ್ಯಾಬ್ಸ್ ಕಂಪನಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಮೈಕ್ರೋ ಲ್ಯಾಬ್ಸ್ ನೂರಾರು ಕೋಟಿ ರೂಪಾಯಿಯ ಡೋಲೊ -650 ಮಾತ್ರೆ ಮಾರಾಟ ಮಾಡುವ ಮೂಲಕ ಅತೀ ಹೆಚ್ಚು ವ್ಯಾಪಾರ ವಹಿವಾಟು ನಡೆಸಿತ್ತು.ವೈದ್ಯರ ಚೀಟಿ ಇಲ್ಲದೆ ಜನರೇ ಮೆಡಿಕಲ್‌ಗಳಿಂದ ಡೋಲೊ ಮಾತ್ರೆ ಖರೀದಿಸಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದರು.
ಆದರೆ ಕೊರೋನ ಕಾಲದಲ್ಲಿ ಮಾಡಿರುವ ಸಾವಿರಾರು ಕೋಟಿ ರೂಪಾಯಿ ಆದಾಯಕ್ಕೆ ಸರಿಯಾಗಿ ತೆರಗೆ ಕಟ್ಟದೆ ವಂಚಿಸಿದ್ದ ಆರೋಪ ಹಿನ್ನೆಲೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮೈಕ್ರೋ ಲ್ಯಾಬ್ಸ್ ಕೇಂದ್ರ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಂಪನಿ ಸಿಎಂಡಿ ದಿಲೀಪ್ ಸುರಾನಾ, ಡೈರೆಕ್ಟರ್ ಆನಂದ್ ಸುರಾನ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.
ಬೆಂಗಳೂರಿನಲ್ಲಿ ಮೈಕ್ರೋಲ್ಯಾಬ್ಸ್ ಕೇಂದ್ರ ಕಚೇರಿಯಿದ್ದು, ಬೆಂಗಳೂರಿನ ಕೇಂದ್ರ ಕಚೇರಿ ಮೇಲೂ ಐಟಿ ರೇಡ್​ ಮಾಡಿದ್ಧಾರೆ. ತಮಿಳುನಾಡು, ಗೋವಾ, ಪಂಜಾಬ್, ಮುಂಬೈ ದೆಹಲಿ, ಸಿಕ್ಕಿಂ ಸೇರಿದಂತೆ ದೇಶದ 40 ಕಡೆಗಳಲ್ಲಿ ದಾಳಿ ನಡೆದಿದೆ. ಐಟಿ ತೆರಿಗೆ ವಂಚನೆ ಮಾಹಿತಿ ಮೇಲೆ ರೇಡ್ ಮಾಡಿದ್ಧಾರೆ. ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ ಬೆಳಗ್ಗೆ 7 ಗಂಟೆಯಿಂದಲೇ 25ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

Latest Posts

error: Content is protected !!