Saturday, October 1, 2022
spot_img
Homeಸುದ್ದಿಗೃಹ ಬಳಕೆ ಸಿಲಿಂಡರ್‌ ಬೆಲೆ 50 ರೂ. ಹೆಚ್ಚಳ

ಗೃಹ ಬಳಕೆ ಸಿಲಿಂಡರ್‌ ಬೆಲೆ 50 ರೂ. ಹೆಚ್ಚಳ

ಹೊಸದಿಲ್ಲಿ: ಇತ್ತೀಚೆಗಷ್ಟೇ ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಇಳಿಕೆ ಮಾಡಿ ರಿಲೀಫ್‌ ನೀಡಿದ್ದ ತೈಲ ಕಂಪೆನಿಗಳು ಇದೀಗ ಗೃಹ ಬಳಕೆಯ ಸಿಲಿಂಡ್‌ ಬೆಲೆಯನ್ನು ಮಾತ್ರ 50 ರೂ. ಏರಿಕೆ ಮಾಡಿವೆ.
ಇಂದು ಗೃಹ ಬಳಕೆಯ ಸಿಲಿಂಡರ್‌ ಬೆಲೆಯನ್ನು 50 ರೂ. ಏರಿಸಿದ ಪ್ರಕಟನೆ ಹೊರಬಿದ್ದಿದೆ. ಇದರಿಂದಾಗಿ ಕರ್ನಾಟಕದಲ್ಲಿ ಗೃಹ ಬಳಕೆ ಸಿಲಿಂಡರ್‌ ದರ 1,005.50 ರೂ. ಅಗುತ್ತದೆ.ತೈಲ ಕಂಪನಿಗಳು 14.5 ಕೆಜಿಯ ಗೃಹ ಬಳಕೆಯ ಸಿಲಿಂಡರ್‌ ಬೆಲೆ ಏರಿಸಿರುವ ಕುರಿತು ಇಂದು ಅಧಿಸೂಚನೆ ಹೊರಡಿಸಿವೆ. ಇದೇ ವೇಳೆ ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆ ಇಂದು ಮತ್ತೆ 8.50 ರೂ. ಇಳಿಕೆಯಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!