ಉಪರಾಷ್ಟ್ರಪತಿ ಸ್ಥಾನಕ್ಕೆ ಮುಸ್ಲಿಂ ಅಭ್ಯರ್ಥಿ ಸಾಧ್ಯತೆ

ಹೊಸದಿಲ್ಲಿ: ರಾಷ್ಟ್ರಪತಿ ಹುದ್ದೆಗೆ ಆದಿವಾಸಿ ಜನಾಂಗದ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಅಚ್ಚರಿಯುಂಟು ಮಾಡಿದ್ದ ಬಿಜೆಪಿ ಇದೀಗ ಉಪರಾಷ್ಟ್ರಪತಿ ಹುದ್ದೆಗೂ ಇದೇ ಮಾದರಿಯ ಅಚ್ಚರಿಯ ಅಭ್ಯರ್ಥಿಯನ್ನು ಆರಿಸಲು ತೀರ್ಮಾನಿಸಿದೆ. ಮುಸ್ಲಿಂ ನಾಯಕರೊಬ್ಬರನ್ನು ಉಪರಾಷ್ಟ್ರಪತಿ ಮಾಡಲು ಬಿಜೆಪಿ ತೀರ್ಮಾನಿಸಿದೆ ಎನ್ನಲಾಗುತ್ತಿದೆ.ಆದರೆ ಕೊನೆಯವರೆಗೂ ನಿರ್ಧಾರವನ್ನು ರಹಸ್ಯವಾಗಿಟ್ಟುಕೊಳ್ಳುವುದು ಬಿಜೆಪಿಯ ತಂತ್ರಗಾರಿಕೆ. ಹೀಗಾಗಿ ಅಭ್ಯರ್ಥಿ ಘೋಷಣೆಯಾದ ಬಳಿಕವಷ್ಟೇ ಈ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯ.
ಆಗಸ್ಟ್ 6ರಂದು ಉಪರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ.
ಬಿಜೆಪಿಯ ಮುಸ್ಲಿಂ ಮುಖ ಎಂದೇ ಕರೆಯಲ್ಪಡುವ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಕೇಂದ್ರದ ಮಾಜಿ ಸಚಿವೆ ನಜ್ಮಾ ಹೆಪ್ತುಲ್ಲಾ ಹೆಸರುಗಳು ಬಿಜೆಪಿ ಪಾಳಯದಿಂದ ಕೇಳಿ ಬರುತ್ತಿವೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಜೆಪಿ ಸೇರಿ ಉಪರಾಷ್ಟ್ರಪತಿ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಊಹಾಪೋಹಗಳು ಇದ್ದರೂ ಬೇರೆ ಪಕ್ಷದಿಂದ ಬಂದವರಿಗೆ ಒಮ್ಮೆಲೆ ಇಷ್ಟು ಉನ್ನತ ಹುದ್ದೆ ಸಿಗುವುದು ಕಷ್ಟ. ಹೀಗಾಗಿ ಆರಿಫ್ ಮೊಹಮ್ಮದ್ ಖಾನ್, ನಖ್ವಿ, ನಜ್ಮಾ ಹೆಪ್ತುಲ್ಲಾ ಈ ಮೂವರಲ್ಲಿ ಒಬ್ಬರ ಹೆಸರು ಅಂತಿಮಗೊಳ್ಳಬಹುದು. ಅದರೆ ರಾಷ್ಟ್ರಪತಿ ಅಭ್ಯರ್ಥಿ ಮಹಿಳೆಯಾಗಿರುವುದರಿಂದ ಉಪರಾಷ್ಟ್ರಪತಿ ಹುದ್ದೆಗೂ ಮಹಿಳೆ ಆಯ್ಕೆಯಾಗುವುದನ್ನು ಎನ್‌ಡಿಎ ಅಪೇಕ್ಷಿಸಲಿಕ್ಕಿಲ್ಲ. ಹೀಗಾಗಿ ನಜ್ಮಾ ಹೆಫ್ತುಲ್ಲಗೆ ಅವಕಾಶ ಸಿಗುವುದು ಅನುಮಾನ.
ಹಾಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಅವಧಿ ಆಗಸ್ಟ್ 10 ರಂದು ಕೊನೆಗೊಳ್ಳುತ್ತದೆ. ಮುಂದಿನ ಉಪರಾಷ್ಟ್ರಪತಿ ಆಗಸ್ಟ್ 11 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜುಲೈ 20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜುಲೈ 22 ಕೊನೆಯ ದಿನಾಂಕವಾಗಿದೆ.



































































































































































error: Content is protected !!
Scroll to Top