Homeಸ್ಥಳೀಯ ಸುದ್ದಿಪ್ರೊ. ದಾಮೋದರ ಕಿಣಿಯವರ ವ್ಯಕ್ವಿತ್ವ ಅನುಕರಣೀಯ -ಮಾದರಿ - ಡಾ. ಪಿ.ಎಸ್.‌ ಎಡಪಡಿತ್ತಾಯ

Related Posts

ಪ್ರೊ. ದಾಮೋದರ ಕಿಣಿಯವರ ವ್ಯಕ್ವಿತ್ವ ಅನುಕರಣೀಯ -ಮಾದರಿ – ಡಾ. ಪಿ.ಎಸ್.‌ ಎಡಪಡಿತ್ತಾಯ

ಕಿಣಿಯವರು ತೋರಿದ ದಾರಿಯಲ್ಲಿ ಬೆಳಕು ಕಂಡೆವು – ಕಮಲಾಕ್ಷ ಕಾಮತ್‌

ಕಾರ್ಕಳ : ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾಗಿದ್ದ ದಾಮೋದರ ಕಿಣಿಯವರು ಕಾರ್ಕಳಕ್ಕೆ ಮಾತ್ರವಲ್ಲದೇ ಇಡೀ ನಾಡಿಗೆ ಭೂಷಣಪ್ರಾಯರಾಗಿದ್ದರು. ಅವರ ಹೆಸರು ಕೇಳಿಯೇ ರಾಜ್ಯದ ಮೂಲೆ ಮೂಲೆಯಿಂದ ವಿದ್ಯಾರ್ಥಿಗಳು ಶ್ರೀ ಭುವನೇಂದ್ರ ಕಾಲೇಜಿಗೆ ಬರುವಂತಾಗಿತ್ತು ಎಂದು ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಡಾ. ಪಿ.ಎಸ್. ಎಡಪಡಿತ್ತಾಯ ಅಭಿಪ್ರಾಯಪಟ್ಟರು.
ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆದ ಪ್ರೊ. ಕೆ.ಡಿ. ಕಿಣಿ ಸ್ಮಾರಕ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ದತ್ತಿನಿಧಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರೊ. ಕೆ.ಡಿ. ಕಿಣಿಯವರ ವ್ಯಕ್ತಿತ್ವ ವಿದ್ಯಾರ್ಥಿಗಳೊಂದಿಗೆ ಹೆತ್ತವರಿಗೂ ಪ್ರೇರಕ, ಮಾರ್ಗದರ್ಶಕವಾಗಿತ್ತು. 27 ವರ್ಷಗಳ ಕಾಲ ಪ್ರಾಂಶುಪಾಲರಾಗಿದ್ದ ಕಿಣಿಯವರು ಮಾದರಿ ಪ್ರಾಂಶುಪಾಲರಾಗಿ ರಾಜ್ಯದಲ್ಲೇ ಗುರುತಿಸಿಕೊಂಡಿದ್ದರು ಎಂದು ಎಡಪಡಿತ್ತಾಯರು ಹೇಳಿದರು.

ಕಿಣಿಯವರು ತೋರಿದ ದಾರಿಯಲ್ಲಿ ಬೆಳಕು ಕಂಡೆವು – ಕಮಲಾಕ್ಷ ಕಾಮತ್‌
ಕಾಲೇಜಿನ 1968ರ ಸಾಲಿನ ಬಿ.ಕಾಂ. ವಿದ್ಯಾರ್ಥಿ, ಖ್ಯಾತ ಚಾರ್ಟೆಡ್ ಅಕೌಂಟೆಂಟ್‌ ಕಮಲಾಕ್ಷ ಕಾಮತ್ ಮಾತನಾಡಿ, ಪ್ರೊ. ಕೆ.ಡಿ. ಕಿಣಿಯವರಿಂದಾಗಿ ಶ್ರೀ ಭುವನೇಂದ್ರ ಕಾಲೇಜು ಬಹಳ ವ್ಯವಸ್ಥಿತವಾಗಿ ಬೆಳೆದುಬಂದಿದೆ. ಕಿಣಿಯವರಿಂದಾಗಿ ನಾವು ಬದುಕಿನ ದಾರಿಯಲ್ಲಿ ಬೆಳಕನ್ನು ಕಂಡೆವು ಎಂದರು. ಶ್ರೀ ಭುವನೇಂದ್ರ ಪದವಿ ಪೂರ್ವಕಾಲೇಜಿನ ಪ್ರಾಚಾರ್ಯ ರಮೇಶ್ ಎಸ್.ಸಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಹುಮಾನ
ಪ್ರೊ.ಕೆ.ಡಿ. ಕಿಣಿ ಅಂತರ್ ಕಾಲೇಜು ಮಟ್ಟದ ಪ್ರಬಂಧ ಸ್ಪರ್ಧೆ, ಭಾವಗೀತೆ ಸ್ಪರ್ಧೆಯ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಕಮಲಾಕ್ಷ ಕಾಮತ್ ಅವರು ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್‌ ಶಿಪ್‌ ನೀಡಿದರು.

ಚಂದನ ಬಿಡುಗಡೆ
2020-21 ನೇ ಸಾಲಿನ ಶ್ರೀ ಭುವನೇಂದ್ರ ಕಾಲೇಜಿನ ವಾರ್ಷಿಕಾಂಕ ‘ಚಂದನ’ವನ್ನು ಉಪಕುಲಪತಿ ಪ್ರೊ. ಪಿ. ಎಸ್. ಎಡಪಡಿತ್ತಾಯ ಅವರು ಅನಾವರಣಗೊಳಿಸಿದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಎ. ಶಿವಾನಂದ ಪೈ ಸ್ವಾಗತಿಸಿ, ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥ ನಂದಕಿಶೋರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಭುವನೇಂದ್ರ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ್ ಎ. ಕೋಟ್ಯಾನ್ ವಂದಿಸಿದರು.

LEAVE A REPLY

Please enter your comment!
Please enter your name here

Latest Posts

error: Content is protected !!