ಗಾಂಜಾ ಮಾರಾಟ ತಕರಾರು ಕಾರಣ
ಬಂಟ್ವಾಳ : ಸ್ನೇಹಿತರೇ ಯುವಕನೊಬ್ಬನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿರುವ ಕೃತ್ಯ ಸೋಮವಾರ ಮಧ್ಯರಾತ್ರಿ ಹೊತ್ತು ಬಂಟ್ವಾಳದ ತಲಪಾಡಿ ಸಮೀಪ ಕೈಕಂಬ ಎಂಬಲ್ಲಿ ಸಂಭವಿಸಿದೆ
ಶಾಂತಿ ಅಂಗಡಿ ನಿವಾಸಿ ಮಹಮ್ಮದ್ ಆಶಿಫ್ (29) ಕೊಲೆಯಾದ ಯುವಕ. ನೌಫಾಲ್ ಮತ್ತು ಇನ್ನೋರ್ವ ಸೇರಿ ಕೊಲೆ ಮಾಡಿದ್ದಾರೆ.ಈ ಮೂವರು ಸ್ನೇಹಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಗಾಂಜಾ ಮಾರಾಟಗಾರರಾಗಿದ್ದು, ತಲಪಾಡಿ ಬಳಿ ರಾತ್ರಿ 1 ಗಂಟೆ ಹೊತ್ತಿಗೆ ಗಾಂಜಾ ವಿಚಾರವಾಗಿ ತಕರಾರು ಕಾಣಿಸಿಕೊಂಡ ಆಶಿಫ್ ಕೊಲೆಯಾಗಿದ್ದಾನೆ ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಹೊಟೇಲೊಂದರ ಸಮೀಪ ಈ ಕೊಲೆ ನಡೆದಿದೆ.ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.