Homeಸುದ್ದಿಸುನಂದಾ ಆಚಾರ್ಯ ಚಿಕಿತ್ಸೆಗೆ ನೆರವಾಗಲು ಮನವಿ

Related Posts

ಸುನಂದಾ ಆಚಾರ್ಯ ಚಿಕಿತ್ಸೆಗೆ ನೆರವಾಗಲು ಮನವಿ

ಕಾರ್ಕಳ : ನಿಟ್ಟೆ ಗ್ರಾಮದ ಪರಪ್ಪಾಡಿ ನಿವಾಸಿ ಸುನಂದಾ ಆಚಾರ್ಯ ಅವರು ತಲೆಯ ರಕ್ತನಾಳದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜೂನ್‌ 13ರಂದು ಸುನಂದಾ ಅವರಿಗೆ ತಲೆನೋವು ಕಾಣಿಸಿಕೊಂಡು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದ್ದು, ಜೂನ್ 26ರಂದು ಸುನಂದಾ ಅವರ ಮಗ ಗಣೇಶ್‌ ಆಚಾರ್ಯ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.
ತಪಾಸಣೆ ಸಂದರ್ಭ ಸುನಂದಾ ಅವರ ತಲೆಯ ಎರಡೂ ಬದಿಯ ರಕ್ತನಾಳಗಳು ಊದಿಕೊಂಡಿರುವುದು ಗೋಚರಿಸಿದೆ. ಬಳಿಕ ಸರ್ಜರಿ (Flow Diverter surgery) ಮಾಡಬೇಕೆಂದು ವೈದ್ಯರು ಸಲಹೆ ನೀಡಿದ್ದು, ಅದಕ್ಕೆ ಸುಮಾರು 10 ಲಕ್ಷ ರೂಪಾಯಿ ಖರ್ಚಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸುನಂದಾ ಅವರ ಗಂಡ ಜನಾರ್ದನ ಆಚಾರ್ಯ ಅವರೂ ಅನಾರೋಗ್ಯ ಪೀಡಿತರು. ಮನೆಗೆ ಗಣೇಶ್‌ ಅವರೊಬ್ಬರೇ ಆಧಾರ. ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಅವರೂ ಇದೀಗ ತಾಯಿಯೊಂದಿಗೆ ಇರಬೇಕಾದ ಕಾರಣ ಮನೆಗೆ ಆದಾಯದ ಮೂಲವೇ ಇಲ್ಲದಂತಾಗಿದೆ.
ನೆರವಿಗಾಗಿ ಮನವಿ
ಬಡತನದ ಬೇಗೆಯಿಂದ ಬೆಂದ ಕುಟುಂಬ ಇದೀಗ ತೀರಾ ಸಂಕಷ್ಟದಲ್ಲಿದ್ದು, ಸಹೃದಯ ಬಾಂಧವರು ನೆರವಾಗಬೇಕಿದೆ. ಆಯುಷ್ಮಾನ್‌ ಭಾರತ್‌ ಯೋಜನೆಯಲ್ಲಿ ಕೇವಲ 1 ಲಕ್ಷ ರೂ. ದೊರೆಯಬಹುದೆಂದು ವೈದ್ಯರು ತಿಳಿಸಿರುತ್ತಾರೆ. ಹೀಗಾಗಿ ಹಣ ಹೊಂದಿಸಲು ಸಾಧ್ಯವಾಗದೇ ಜುಲೈ 1ರಂದು ಸುನಂದಾ ವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ತಾಯಿಯ ಚಿಕಿತ್ಸೆಗೆ ನೆರವಾಗುವಂತೆ ಮಗ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನೆರವು ನೀಡಲಿಚ್ಚಿಸುವವರು ಈ ಕೆಳಗಿನ ಖಾತೆಗೆ ಹಣ ರವಾನಿಸಬಹುದು.

A/c number: 81870100000213
IFSC Code: BARB0VJNITT
Branch: Nitte
Google pay: contacet Number 9148228364
Ganesh Acharya

LEAVE A REPLY

Please enter your comment!
Please enter your name here

Latest Posts

error: Content is protected !!