Sunday, October 2, 2022
spot_img
Homeಜಿಲ್ಲಾದ.ಕ. ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು : ನೆರೆ ಭೀತಿ ಜನರಲ್ಲಿ ಆತಂಕ

ದ.ಕ. ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು : ನೆರೆ ಭೀತಿ ಜನರಲ್ಲಿ ಆತಂಕ

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳು ಮೈದುಂಬಿ ಹರಿಯುತ್ತಿದೆ. ಕೃಷಿ ಪ್ರದೇಶದಲ್ಲಿ ಈಗಾಗಲೇ ನೀರು ನುಗ್ಗಿದ್ದು, ಇಲ್ಲಿನ ಎರಡು ನದಿಗಳ ಸಂಗಮ ಸ್ಥಳವಾದ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಸ್ಥಾನದ ಬಳಿ ನೇತ್ರಾವತಿ ನದಿಗೆ ಇಳಿಯಲು ಇರುವ 38 ಮೆಟ್ಟಿಲುಗಳಲ್ಲಿ 25 ಮೆಟ್ಟಿಲುಗಳು ಈಗಾಗಲೇ ಮುಳುಗಿವೆ. ದೇವಾಲಯದ ನದಿಯಲ್ಲಿ ಆಣೆಕಟ್ಟಿನಲ್ಲಿ ಅಳವಡಿಸಿರುವ ಜಲಮಾಪಕದಲ್ಲಿ ನೇತ್ರಾವತಿ ನದಿಯಲ್ಲಿ 28ಮೀ. ನೀರಿದ್ದು, ನೀರಿನ ಅಪಾಯದ ಮಟ್ಟ 30ಮೀ. ಆಗಿದೆ. ಪುತ್ತೂರು ತಹಶೀಲ್ದಾರ್ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿದ್ದು, ನೆರೆ ಬರುವ ಸಾಧ್ಯತೆ ಕಂಡಾಗ ಇಲ್ಲಿಂದ ಸ್ಥಳಾಂತರಗೊಳ್ಳಬೇಕೆಂದು ನಿವಾಸಿಗಳಿಗೆ ಮನವಿ ಮಾಡಿದರು. ಗೃಹರಕ್ಷಕ ದಳದ ಪ್ರಕೃತಿ ವಿಕೋಪ ತಂಡ ದೇವಸ್ಥಾನದ ಬಳಿ ಬೀಡು ಬಿಟ್ಟಿದ್ದು, ನೆರೆ ಬಂದ ಸಂದರ್ಭದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಿದೆ.

LEAVE A REPLY

Please enter your comment!
Please enter your name here

Most Popular

error: Content is protected !!