Sunday, October 2, 2022
spot_img
Homeರಾಜ್ಯರೈತರೇ ಮೊಬೈಲ್‌ ಆ್ಯಪ್ ಮೂಲಕ ಬೆಳೆ ವಿವರ ನಮೂದಿಸಲು ಅವಕಾಶ

ರೈತರೇ ಮೊಬೈಲ್‌ ಆ್ಯಪ್ ಮೂಲಕ ಬೆಳೆ ವಿವರ ನಮೂದಿಸಲು ಅವಕಾಶ

ಯಾವುದು ಆ್ಯಪ್ ? ಸಂಪೂರ್ಣ ವಿವರಕ್ಕಾಗಿ

ಕಾರ್ಕಳ : ಮುಂಗಾರು ಹಂಗಾಮಿನ ಬೆಳೆ ಸಮಿಕ್ಷೆ ಕಾರ್ಯಕ್ಕೆ ಜೂನ್ 11ರಿಂದ ಚಾಲನೆ ನೀಡಲಾಗಿದ್ದು, ಬೆಳೆ ವಿವರ ಸಲ್ಲಿಸಲು ಆಗಸ್ಟ್‌ 31 ಕೊನೆಯ ದಿನವಾಗಿದೆ. ರೈತರೇ ಬೆಳೆ ಸಮೀಕ್ಷೆ ಕೈಗೊಳ್ಳುವ ನಿಟ್ಟಿನಲ್ಲಿ ಸರಕಾರ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದ್ದು, ರೈತರು Kharif Farmer Crop Survey-2022-23 ಆ್ಯಪ್ ಡೌನ್‍ಲೋಡ್ ಮಾಡಿ ಆರ್ಥಿಕ ವರ್ಷ ಹಾಗೂ ಋತುವನ್ನು ದಾಖಲಿಸಬಹುದಾಗಿದೆ. ತರುವಾಯ ಆಧಾರ್‍ ನಲ್ಲಿರುವಂತೆ ಮಾಹಿತಿ ದಾಖಲಿಸಿ, ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸುವುದರಿಂದ ಮೊಬೈಲ್ ಸಂಖ್ಯೆಗೆ otp ಬರಲಿದೆ. otp ಯನ್ನು ದಾಖಲಿಸಿ ಬಳಿಕ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಹಿಸ್ಸಾ, ಮಾಲೀಕನ ಹೆಸರು ನಮೂದಿಸಿ, ಸರ್ವೆ ನಂಬರ್‌, ಗಡಿ ರೇಖೆಯೊಳಗೆ ನಿಂತು ವಿವರವನ್ನು ದಾಖಲಿಸಿದ ಅನಂತರ ಫೋಟೋ ತೆಗೆದು ಮಾಹಿತಿಯನ್ನು ಆಪ್ಲೋಡ್ ಮಾಡಬೇಕಾಗಿದೆ.

ಪ್ರಯೋಜನ
ಬೆಳೆ ಸಮೀಕ್ಷೆ ಮಾಹಿತಿಯನ್ನು ಪ್ರಕೃತಿ ವಿಕೋಪಗಳ ಪರಿಹಾರ ವಿತರಣೆ, ಬೆಂಬಲ ಬೆಲೆ ಯೋಜನೆಯ ಅರ್ಹ ಫಲಾನುಭವಿಗಳ ಗುರುತಿಸುವಿಕೆ, ಬೆಳೆ ವಿಮೆ ಯೋಜನೆ ಅನುಷ್ಠಾನ, ಋತುಮಾನವಾರು ವಿವಿಧ ಬೆಳೆಗಳ ವಿಸ್ತೀರ್ಣ ವರದಿ ಕಾರ್ಯ, ಬೆಳೆ ಕಟಾವು ಪ್ರಯೋಗ ಅನುಷ್ಠಾನ, ಕೃಷಿ/ತೋಟಗಾರಿಕೆ/ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನ ಹಾಗೂ ಪಹಣಿಯಲ್ಲಿ ಬೆಲೆ ವಿವರ ದಾಖಲಿಸಲು ಬಳಸಲಾಗುವುದು. ರೈತರು ತಮ್ಮ ಜಮೀನಿನ ಬೆಳೆ ವಿವರವನ್ನು ಯಾವುದೇ ಲೋಪದೋಷಗಳಿಗೆ ಆಸ್ಪದವಿಲ್ಲದಂತೆ ತಾವೇ ದಾಖಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ರೈತರು ನಿಗದಿತ ಅವಧಿಯೊಳಗೆ ಮೊಬೈಲ್ ಆ್ಯಪ್ನಲ್ಲಿ ತಮ್ಮ ಜಮೀನಿನ ಸರ್ವೆ ನಂಬರ್‌, ಬೆಳೆ ವಿವರವನ್ನು ನಿಖರವಾಗಿ ದಾಖಲಿಸಿ ಮುಂಗಾರು-2022ರ ಬೆಳೆ ಸಮೀಕ್ಷೆ ಕಾರ್ಯವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕೆಂದು ಕಾರ್ಕಳ ಸಹಾಯಕ ಕೃಷಿ ನಿದೇರ್ಶಕರು ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!