Sunday, October 2, 2022
spot_img
Homeಸುದ್ದಿಎನ್.ಇ.ಎಸ್.ಟಿ. : ಜ್ಞಾನಸುಧಾದ ಮೂವರಿಗೆ ರ್‍ಯಾಂಕ್‌

ಎನ್.ಇ.ಎಸ್.ಟಿ. : ಜ್ಞಾನಸುಧಾದ ಮೂವರಿಗೆ ರ್‍ಯಾಂಕ್‌

ಕಾರ್ಕಳ : ನ್ಯಾಷನಲ್‍ ಇನ್ಸ್ಟಿಟ್ಯೂಟ್‍ ಆಫ್ ಸೈನ್ಸ್‌ ಎಜ್ಯುಕೇಶನ್‍ ಮತ್ತು ರಿಸರ್ಚ್(ಎನ್.ಐ.ಎಸ್.ಇ.ಆರ್.)ಭುವನೇಶ್ವರ್ ಹಾಗೂ ಬಾಂಬೆ ಯುನಿವರ್ಸಿಟಿ ಜಂಟಿಯಾಗಿ ನಡೆಸಿದ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ನೆಸ್ಟ್-2022ನಲ್ಲಿ ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಆರ್ಯ ಪಿ. ಶೆಟ್ಟಿ (99.187 ಪರ್ಸಂಟೈಲ್), 113ನೇ ರ್‍ಯಾಂಕ್‌, ಪ್ರಜ್ವಲ್ ಪಟಗಾರ್ (97.851 ಪರ್ಸಂಟೈಲ್), 279ನೇ ರ್‍ಯಾಂಕ್‌ ಜೊತೆಗೆ ಒಬಿಸಿಯಲ್ಲಿ 53ನೇ ರ್‍ಯಾಂಕ್‌ ಮತ್ತು ಸೃಜನ್ ಪ್ರಕಾಶ್ (86.307ಪರ್ಸಂಟೈಲ್), 1123ನೇ ರ್‍ಯಾಂಕ್‌ನೊಂದಿಗೆ ಒಬಿಸಿಯಲ್ಲಿ 302ನೇ ರ್‍ಯಾಂಕ್‌ ಪಡೆದಿದ್ದಾರೆ. ನ್ಯಾಷನಲ್‍ಎಂಟ್ರೆನ್ಸ್ ಸ್ಕ್ರೀನಿಂಗ್ ಟೆಸ್ಟ್ (ನೆಸ್ಟ್) ಪರೀಕ್ಷೆಯು ರಾಷ್ಟ್ರದಾದ್ಯಂತ ಜೂನ್‌ 18ರಂದು ನಡೆದಿದೆ. ಉತ್ತಮ ಅಂಕಗಳೊಂದಿಗೆ ದೇಶದ ಪ್ರಖ್ಯಾತ ಸಂಸ್ಥೆಯಲ್ಲಿ 5 ವರ್ಷದ ಮೂಲ ವಿಜ್ಞಾನ ವಿಷಯದಲ್ಲಿಅಧ್ಯಯನ ನಡೆಸಲು ಮುಂದಿನ ಸಂದರ್ಶನ ಪರೀಕ್ಷೆಗೆ ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here

Most Popular

error: Content is protected !!