Homeರಾಜ್ಯಚೀನಾ ಮೂಲದ ಮೊಬೈಲ್‌ ಕಂಪನಿಗೆ ಸೇರಿದ 44 ಸ್ಥಳಗಳಲ್ಲಿ ಇಡಿ ದಾಳಿ

Related Posts

ಚೀನಾ ಮೂಲದ ಮೊಬೈಲ್‌ ಕಂಪನಿಗೆ ಸೇರಿದ 44 ಸ್ಥಳಗಳಲ್ಲಿ ಇಡಿ ದಾಳಿ

ಬೆಂಗಳೂರು : ಚೀನಾ ಮೂಲದ ಮೊಬೈಲ್‌ ಫೋನ್‌ ಕಂಪನಿಯಾದ ವಿವೋ ಮತ್ತು ಅದಕ್ಕೆ ಸಂಬಂಧಿಸಿದ ಇತರ ಸಂಸ್ಥೆಗಳಿಗೆ ಸೇರಿದ 44 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ಇಂದು ದಾಳಿ ನಡೆಸಿದೆ. ನೆರೆಯ ದೇಶಗಳೊಂದಿಗೆ ನಂಟು ಹೊಂದಿರುವ ಉದ್ಯಮಗಳ ಮೂಲವನ್ನು ಹುಡುಕುತ್ತಿರುವ ಹಿನ್ನೆಲೆಯಲ್ಲಿ ಮೇ ತಿಂಗಳಿನಲ್ಲಿ ZTE‌ ಕಾರ್ಪೋರೇಶನ್ ಮತ್ತು ವಿವೋ ಮೊಬೈಲ್‌ ಕಮ್ಯುನಿಕೇಷನ್ಸ್‌ ಕಂಪನಿಯು ಹಣಕಾಸು ಅವ್ಯವಹಾರದ ಆರೋಪದ ಮೇಲೆ ತನಿಖೆಯನ್ನು ಎದುರಿಸಿದ್ದವು. ಮಾಲಿಕತ್ವ ಮತ್ತು ಹಣಕಾಸು ವರದಿಗೆ ಸಂಬಂಧಿಸಿದಂತೆ ವಿವೋದಲ್ಲಿ ಅವ್ಯವಹಾರ ನಡೆದಿದಯೇ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಎಪ್ರಿಲ್‌ ತಿಂಗಳಿನಲ್ಲಿ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಇಡಿ ತಂಡವು 44 ಕಡೆಗಳಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!