Homeರಾಜ್ಯಚಂದ್ರಶೇಖರ್‌ ಗುರೂಜಿ ಕೊಲೆ ಪ್ರಕರಣ : ಆಪ್ತ ಮಹಾಂತೇಶ್‌ ಶಿರೋಳ್‌ ಪತ್ನಿ ವನಜಾಕ್ಷಿ ಬಂಧನ

Related Posts

ಚಂದ್ರಶೇಖರ್‌ ಗುರೂಜಿ ಕೊಲೆ ಪ್ರಕರಣ : ಆಪ್ತ ಮಹಾಂತೇಶ್‌ ಶಿರೋಳ್‌ ಪತ್ನಿ ವನಜಾಕ್ಷಿ ಬಂಧನ

ಹುಬ್ಬಳ್ಳಿ : ನಗರದಲ್ಲಿ ನಡೆದ ಚಂದ್ರಶೇಖರ್‌ ಗುರೂಜಿಯ ಬರ್ಬರ ಕೊಲೆ ಪ್ರಕರಣ ಹಿನ್ನೆಲೆ ಗುರೂಜಿಯ ಆಪ್ತ ಮಹಾಂತೇಶ ಶಿರೋಳ್‌ ಪತ್ನಿ ವನಜಾಕ್ಷಿಯನ್ನು ಗೋಕುಲ ರೋಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಂತಕರಿಬ್ಬರು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮದ ನಿವಾಸಿಗಳಾದ ಮಹಾಂತೇಶ ಶಿರೋಳ್‌ ಮತ್ತು ಮಂಜುನಾಥ್‌ ದುಮ್ಮವಾಡ ಎಂದು ಗುರುತಿಸಲಾಗಿದೆ. ವನಜಾಕ್ಷಿ ಹೆಸರಿನಲ್ಲಿ ಬೇನಾಮಿ ಆಸ್ತಿ ನೋಂದಾವಣೆ ಮಾಡಿಸಿದ್ದ ಗುರೂಜಿ. 2019 ರವರೆಗೆ ಸರಳವಾಸ್ತು ಸಂಸ್ಥೆಯಲ್ಲಿ ಕೆಲಸಮಾಡುತ್ತಿದ್ದ ವನಜಾಕ್ಷಿ ಹೆಸರಿನಲ್ಲಿ ಗೋಕುಲ ಬಳಿ ಇರುವ ಅಪಾರ್ಟಮೆಂಟ್‌ನ್ನು ನೋಂದಾವಣೆ ಮಾಡಿಸಿದ್ದರು. ಈ ಕುರಿಂತೆ ಹಲವಾರು ಬಾರಿ ಅವರ ನಡುವೆ ಗಲಾಟೆ ಆಗಿತ್ತು. ಬಹುಶಃ ಬೇನಾಮಿ ಆಸ್ತಿಗಾಗಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!