ಮಮತಾ ಬ್ಯಾನರ್ಜಿ ಮನೆಗೆ ಅಕ್ರಮವಾಗಿ ನುಗ್ಗಿ ರಾತ್ರಿ ಕಳೆದ ಅಪರಿಚಿತ

ಕೋಲ್ಕತ್ತ: ಅಪರಿಚಿತ ವ್ಯಕ್ತಿಯೊಬ್ಬ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾಜರ್ಜಿಯವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಅಲ್ಲಿಯೇ ಒಂದು ರಾತ್ರಿಯನ್ನು ಕಳೆದಿದ್ದಾನೆ. ಇಷ್ಟು ಗಂಭೀರವಾದ ಭದ್ರತಾ ಲೋಪ ಆಗಿದ್ದರೂ ಪೊಲೀಸರಿಗೆ ಅಕ್ರಮ ನುಸುಳುವಿಕೆ ನಡೆದಿರುವುದು ತಿಳಿದದ್ದು ಇಂದು ಬೆಳಗ್ಗೆಯೇ.
ಭಾನುವಾರ ಮಧ್ಯರಾತ್ರಿ ಕಳೆದು 1 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬ ಕೋಲ್ಕತ್ತದ ಕಾಳಿಘಾಟ್‌ ರಸ್ತೆಯ ಹರೀಶ್‌ ಚಟರ್ಜಿ ಬಡಾವಣೆಯಲ್ಲಿರುವ ಮುಖ್ಯಮಂತ್ರಿಯ ಅಧಿಕೃತ ನಿವಾಸಕ್ಕೆ ಕಂಪೌಂಡ್‌ ಗೋಡೆ ಜಿಗಿದು ಒಳ ನುಗ್ಗಿದ್ದಾನೆ.
ಝಡ್‌ ಪ್ಲಸ್‌ ಭದ್ರತೆಯಿರುವ ಬಂಗಲೆಯ ಒಂದು ಮೂಲೆಯಲ್ಲಿ ಅವನು ಇಡೀ ರಾತ್ರಿಯನ್ನು ಕಳೆದಿದ್ದಾನೆ. ಮೂಲೆಯಲ್ಲಿ ಮುದುರಿ ಮಲಗಿದ್ದ ಅವನನ್ನು ಭದ್ರತಾ ಸಿಬ್ಬಂದಿ ಗಮನಿಸಿದ್ದು ಬೆಳಗಾದ ಮೇಲೆಯೇ.
ಈ ಗಂಭೀರ ಭದ್ರತಾ ಲೋಪ ಪೊಲೀಸ್‌ ಇಲಾಖೇಯನ್ನು ಮಾತ್ರವಲ್ಲದೆ ಪಶ್ಚಿ ಬಂಗಾಲ ಸರಕಾರವೂ ತಲೆ ತಗ್ಗಿಸುವಂತೆ ಮಾಡಿದೆ. ಮನೆಗೆ ನುಗ್ಗಿದ ವ್ಯಕ್ತಿಯ ಉದ್ದೇಶವೇನಿತ್ತು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





























































































































































































































error: Content is protected !!
Scroll to Top