Saturday, October 1, 2022
spot_img
Homeಸುದ್ದಿಕಾರ್ಪೊರೇಟ್ ಫ್ಯಾಶನ್ ವೀಕ್ ಸ್ಪರ್ಧೆಯಲ್ಲಿ ಕಾರ್ಕಳ ಸುಮೇಧಾ ಫ್ಯಾಶನ್‌ ಸಂಸ್ಥೆಗೆ ರಾಜ್ಯಮಟ್ಟದ ಪ್ರಶಸ್ತಿ

ಕಾರ್ಪೊರೇಟ್ ಫ್ಯಾಶನ್ ವೀಕ್ ಸ್ಪರ್ಧೆಯಲ್ಲಿ ಕಾರ್ಕಳ ಸುಮೇಧಾ ಫ್ಯಾಶನ್‌ ಸಂಸ್ಥೆಗೆ ರಾಜ್ಯಮಟ್ಟದ ಪ್ರಶಸ್ತಿ

ಕಾರ್ಕಳ : ಬೆಂಗಳೂರು ಕಾರ್ಪೊರೇಟ್ ವುಮೆನ್ ಆ್ಯಂಡ್ ವುಮೆನ್ ಎಂಟರ್ಪ್ರಿನರ್ ಆಶ್ರಯದಲ್ಲಿ ಹೋಟೆಲ್ ತಿಲಕ್ ಅಶೋಕದ ಸಭಾಂಗಣದಲ್ಲಿ ನಡೆದ “ಬಿ ಯುವರ್ ಓನ್ ಲೇಬಲ್ ಫಾರ್ ವುಮನ್” ಸ್ಪರ್ಧೆಯಲ್ಲಿ ಭಾಗವಹಿಸಿದ ಕಾರ್ಕಳದ ಸುಮೇಧಾ ಫ್ಯಾಶನ್ ಸಂಸ್ಥೆಯು ರಾಜ್ಯಮಟ್ಟದ ಪ್ರಶಸ್ತಿ ಗಳಿಸಿದೆ. ಕಾರ್ಪೊರೇಟ್ ಫ್ಯಾಶನ್ ವೀಕ್ 2022 ಗ್ರ್ಯಾಂಡ್ ಪಿನಾಲೆಯ ಮಾಡೆಲ್ ಗಳಿಗೆ ತಯಾರಿಸಿದ ನೂತನ ಬಗೆಬಗೆಯ ವಸ್ತ್ರವಿನ್ಯಾಸಕ್ಕಾಗಿ ಪ್ರಶಸ್ತಿ ಸುಮೇಧಾ ಸಂಸ್ಥೆಗೆ ಪಶಸ್ತಿ ಲಭಿಸಿದೆ.
ಕಳೆದ ವರ್ಷ ಕಿರುತೆರೆಯ ನಟಿಯರಿಗೆ ಮಾಡಿದ ವಸ್ತ್ರವಿನ್ಯಾಸಕ್ಕಾಗಿ ಸುಮೇಧಾ ಫ್ಯಾಶನ್ ಸಂಸ್ಥೆಯ ಪ್ರಾಂಶುಪಾಲೆ ಸಾಧನ ಜಿ. ಆಶ್ರಿತ್ ಕಿರುತೆರೆಯ ಪ್ರತಿಷ್ಠಿತ ರಾಜ್ಯ ಮಟ್ಟದ ಗೋಲ್ಡನ್ ವುಮೆನ್ ಅವಾರ್ಡ್ ಪಡೆದಿದ್ದರು. ತಂಡದಲ್ಲಿ ಸುಮೇಧಾ ಸಂಸ್ಥೆಯ ವಿದ್ಯಾರ್ಥಿಗಳಾದ ಚಂದನ, ಪ್ರಮೋದ, ಪಂಚಮಿ, ಜಯಂತಿ, ಸುಪ್ರಿಯಾ, ಕಾದಂಬರಿ ಶೆಟ್ಟಿ, ನವ್ಯ, ಸೌಜನ್ಯ, ಪ್ರಣಮ್ಯ, ರಶ್ಮಿ, ಶಿಲ್ಪ, ಸೌಮ್ಯ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!