ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ಇದರ ನೂತನ ಅಧ್ಯಕ್ಷರಾಗಿ ನಿವೃತ್ತ ಬ್ಯಾಂಕ್ ಅಧಿಕಾರಿ ಮೋಹನ್ ಶೆಣೈ ಎರ್ಮಾಳ್, ಕಾರ್ಯದರ್ಶಿಯಾಗಿ ಕಾರ್ಕಳ ಸರಕಾರಿ ಆಸ್ಪತ್ರೆ ಹಿರಿಯ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಶಿವಕುಮಾರ್ ಅವರು ಆಯ್ಕೆಯಾಗಿರುತ್ತಾರೆ. ಕೋಶಾಧಿಕಾರಿಯಾಗಿ ಗೀತಾ ಸುಧೀರ್ ಕಾಮತ್, ಉಪಾಧ್ಯಕ್ಷರಾಗಿ ಹರೀಶ್ಚಂದ್ರ ಹೆಗ್ಡೆ, ಜೊತೆ ಕಾರ್ಯದರ್ಶಿಯಾಗಿ ರೋಷನ್ ಡಿʼಮೆಲ್ಲೊ, ಪದಾಧಿಕಾರಿಗಳಾಗಿ ಶೈಲೇಂದ್ರ ರಾವ್, ಇಕ್ಬಾಲ್ ಅಹಮ್ಮದ್, ಹರಿಪ್ರಕಾಶ್ ಶೆಟ್ಟಿ ಬಿ., ಜಗದೀಶ್ ಟಿ.ಎ., ರೇಖಾ ಉಪಾಧ್ಯಾಯ, ಪ್ರಕಾಶ್ ಆಚಾರ್ ಬಿ., ಡಾ. ಕೀರ್ತಿನಾಥ್ ಬಲ್ಲಾಳ್, ವೇಣುಗೋಪಾಲ್ ಪಿ.ಎಸ್., ಶೇಖರ್ ಎಚ್., ಡಯಸ್ ಚೆರಿಯನ್, ವಸಂತ ಎಂ., ಸಲಹಾ ಸಮಿತಿ ಸದಸ್ಯರಾಗಿ ಮೋಹನ್ ಶೆಣೈ ಎರ್ಮಾಳ್, ಡಾ. ಭರತೇಶ್ ಆದಿರಾಜ್, ತುಕಾರಾಮ ನಾಯಕ್, ಭಾಸ್ಕರ್ ಕಾರಂತ್, ಚಂದ್ರಶೇಖರ್ ಹೆಗ್ಡೆ, ಪ್ರಭಾತ್ ಕುಮಾರ್, ಜನಾರ್ಧನ್ ಇ., ಮೋಹನ್ ಪಡಿವಾಳ್, ಸೌಜನ್ಯ ಉಪಾಧ್ಯಾಯ, ಸುವರ್ಣ ನಾಯಕ್ ಅವರು ಆಯ್ಕೆಗೊಂಡಿರುತ್ತಾರೆ.
ಜು. 6ರಂದು ಪದಪ್ರದಾನ
ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು. 6ರ ಬುಧವಾರ ಸಂಜೆ 6 ಗಂಟೆಗೆ ಹೊಟೇಲ್ ಪ್ರಕಾಶ್ನ ಉತ್ಸವ ಸಭಾಂಗಣದಲ್ಲಿ ನಡೆಯಲಿದೆ. ರೋಟರಿ ಜಿಲ್ಲಾ ಮಾಜಿ ಗವರ್ನರ್ ಭರತೇಶ್ ಆದಿರಾಜ್ ಪದಪ್ರದಾನ ನೆರವೇರಿಸುವರು. ಮಂಗಳೂರು ವಿವಿ ಉಪಕುಲಪತಿ ಡಾ. ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ರೋಟರಿ ಅಸಿಸ್ಟಂಟ್ ಗವರ್ನರ್ ಡಾ. ಶಶಿಕಾಂತ್ ಕರಿಂಕ, ವಲಯ ಪ್ರತಿನಿಧಿ ಸುವರ್ಣ ನಾಯಕ್ ಉಪಸ್ಥಿತರಿರುವರು.