Sunday, October 2, 2022
spot_img
Homeಸ್ಥಳೀಯ ಸುದ್ದಿನಿಟ್ಟೆ : ವಿದ್ಯುತ್‌ ತಂತಿಗೆ ಚಾಚಿಕೊಂಡ ಮರದ ಬಳ್ಳಿ - ಅವಘಡ ಸಾಧ್ಯತೆ

ನಿಟ್ಟೆ : ವಿದ್ಯುತ್‌ ತಂತಿಗೆ ಚಾಚಿಕೊಂಡ ಮರದ ಬಳ್ಳಿ – ಅವಘಡ ಸಾಧ್ಯತೆ

ವಿದ್ಯುತ್‌ನಲ್ಲಿ ವ್ಯತ್ಯಯ – ಹಾನಿಗೀಡಾಗುತ್ತಿರುವ ಉಪಕರಣ

ಕಾರ್ಕಳ : ನಿಟ್ಟೆ ರಸ್ತೆ ಬದಿಯಿರುವ ವಿದ್ಯುತ್‌ ತಂತಿಗೆ ಮರದ ಬಳ್ಳಿ ಚಾಚಿಕೊಂಡಿದ್ದು, ಬಳ್ಳಿ ಮೂಲಕ ವಿದ್ಯುತ್ ನೆಲಕ್ಕೆ ಪ್ರವಹಿಸಿದಲ್ಲಿ ಅವಘಡ ಸಂಭವಿಸುವ ಸಾ‍ಧ್ಯತೆ ಅಧಿಕವಾಗಿದೆ. ಇಲ್ಲಿನ ಎಚ್‌ಟಿ ಲೈನ್‌ಗೆ ಮರದ ಗೆಲ್ಲು, ಬಳ್ಳಿ ತಾಗಿ ಈ ಭಾಗದಲ್ಲಿ ವಿದ್ಯುತ್‌ ವ್ಯತ್ಯಯಕ್ಕೂ ಕಾರಣವಾಗುತ್ತಿದೆ. ಇದರಿಂದ ಪದೇ ಪದೇ ಪವರ್‌ ಕಟ್‌ ಆಗುತ್ತಿದ್ದು, ಮನೆ, ಹೊಟೇಲ್‌ಗಳಲ್ಲಿನ ವಿದ್ಯುತ್‌ ಉಪಕರಣಗಳು ಹಾನಿಗೀಡಾಗುತ್ತಿದೆ.

ಒಣಗಿದ ಮರ
ನಿಟ್ಟೆ ರಸ್ತೆ ಬದಿ ಒಣಗಿದ ಮರಗಳೂ ಕಂಡುಬರುತ್ತಿದ್ದು, ಇದರ ತೆರವು ಕಾರ್ಯವೂ ಆಗಿಲ್ಲ. ಕಂಬ, ವಿದ್ಯುತ್‌ ಪರಿವರ್ತಕ ಸುತ್ತ ಹುಲುಸಾಗಿ ಬೆಳೆದ ಗಿಡಬಳ್ಳಿ, ಹಬ್ಬಿರುವ ಬಳ್ಳಿ, ಒಣಗಿದ ಮರಗಳನ್ನು ತೆರವುಗೊಳಿಸುತ್ತ ಮೆಸ್ಕಾಂ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮುಂದಾಗಬೇಕಾಗಿದೆ. ಈ ಮೂಲಕ ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!