Saturday, October 1, 2022
spot_img
Homeಸ್ಥಳೀಯ ಸುದ್ದಿಪುರಸಭಾ ವಿಶೇಷ ಸಾಮಾನ್ಯ ಸಭೆಗೆ ಪತ್ರಕರ್ತರಿಗಿಲ್ಲ ಆಹ್ವಾನ - ಸಭೆ ಮುಂದೂಡಲು ಪಟ್ಟು ಹಿಡಿದ ವಿಪಕ್ಷ

ಪುರಸಭಾ ವಿಶೇಷ ಸಾಮಾನ್ಯ ಸಭೆಗೆ ಪತ್ರಕರ್ತರಿಗಿಲ್ಲ ಆಹ್ವಾನ – ಸಭೆ ಮುಂದೂಡಲು ಪಟ್ಟು ಹಿಡಿದ ವಿಪಕ್ಷ

ಕಾರ್ಕಳ : ಪುರಸಭೆಯ ವಿಶೇಷ ಸಾಮಾನ್ಯ ಸಭೆಗೆ ಪತ್ರಕರ್ತರಿಗೆ ಆಹ್ವಾನ ನೀಡದ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ಸದಸ್ಯ ಶುಭದ ರಾವ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕಾರ್ಕಳ ಉತ್ಸವ ಲೆಕ್ಕಪತ್ರ ವಿಶೇಷ ಸಭೆಯನ್ನು ಮುಂದೂಡುವಂತೆ ಪುರಸಭಾ ಅ‍ಧ್ಯಕ್ಷರು ಹಾಗೂ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಕಾರ್ಕಳ ಉತ್ಸವದ ಲೆಕ್ಕಪತ್ರದ ಬಗ್ಗೆ ಇರುವಂತಹ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಸೋಮವಾರ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿದೆ. ಸಭೆಗೆ ಪತ್ರಕರ್ತರಿಗೆ ಆಹ್ವಾನ ನೀಡದೇ ಇರುವುದು ಜನ ಸಾಮಾನ್ಯರಲ್ಲಿ ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ. ನಮ್ಮ ಪ್ರತಿಯೊಂದು ಮಾತುಗಳು ಕೂಡ ಜನರಿಗೆ ತಿಳಿಯಬೇಕು. ನಾವು ಜನರಿಗೆ ಪತ್ರಕರ್ತರ ಮೂಲಕ ನಮ್ಮ ಕೆಲಸ ಕಾರ್ಯಗಳ ವಿವರವನ್ನು ತಲುಪಿಸಬೇಕು. ಆದ್ದರಿಂದ ಸಭೆಯನ್ನು ಮುಂದೂಡಬೇಕೆಂದು ಶುಭದ ರಾವ್‌ ಪಟ್ಟು ಹಿಡಿದರು ಎಂದು ತಿಳಿದುಬಂದಿದೆ. ಇದಕ್ಕೆ ಪ್ರತಿಪಕ್ಷ ಸದಸ್ಯರಾದ ಪ್ರತಿಮಾ, ಪ್ರಭಾ, ರೆಹಮತ್ ಎನ್. ಶೇಖ್, ಹರೀಶ್ ದೇವಾಡಿಗ, ಸೋಮನಾಥ ನಾಯ್ಕ, ಪ್ರವೀಣ್ ಶೆಟ್ಟಿ ಧ್ವನಿಗೂಡಿಸಿದ್ದಾರೆ ಎಂದು ತಿಳಿದುಬಂದಿದೆ.
ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಸ್ಥಾಯೀ ಸಮಿತಿ ಅಧ್ಯಕ್ಷ ಯೋಗೀಶ್ ದೇವಾಡಿಗ, ಸದಸ್ಯರುಗಳಾದ ಪ್ರದೀಪ್ ಮಾರಿಗುಡಿ, ಶೋಭಾ ದೇವಾಡಿಗ ಇತರ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!