ಕಾರ್ಕಳ : ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಬೆಂಗಳೂರು, ಉಡುಪಿ ಜಿಲ್ಲಾ ಘಟಕದ ವತಿಯಿಂದ ಜು. 10 ರ ಭಾನುವಾರ ಕಾರ್ಕಳ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಶಿವಾಜಿ ಜಯಂತೋತ್ಸವ, ವಿದ್ಯಾರ್ಥಿ ವೇತನ, ಸಹಾಯಧನ ವಿತರಣಾ ಸಮಾರಂಭ ನಡೆಯಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಉದ್ಘಾಟಿಸುವರು.
ಕೆ.ಕೆ.ಎಂ.ಪಿ. ರಾಜ್ಯಾಧ್ಯಕ್ಷ ಎಸ್. ಸುರೇಶ್ ರಾವ್ ಸಾಠೆ ಅಧ್ಯಕ್ಷತೆ ವಹಿಸಲಿದ್ದು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೆ.ಕೆ.ಎಂ.ಪಿ. ಗವರ್ನಿಂಗ್ ಕೌನ್ಸಿಲ್ ಚೇರ್ಮ್ಯಾನ್ ವಿ.ಎನ್. ರಾಣೋಜಿ ರಾವ್ ಸಾಠೆ, ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್, ಕೆ.ಕೆ.ಎಂ.ಪಿ. ಪ್ರಧಾನ ಕಾರ್ಯದರ್ಶಿ ಟಿ.ಆರ್. ವೆಂಕಟ್ರಾವ್ ಚವಾಣ್, ಹೊಟೇಲ್ ಉದ್ಯಮಿ ಕೆ. ಉಮೇಶ್ ರಾವ್, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಕ್ಷತ್ರಿಯ ಮರಾಠ ಪರಿಷತ್ ಪ್ರಮುಖರಾದ ಎಸ್.ಆರ್. ಸಿಂಧೆ, ಬಿ. ಕೇಶವ ರಾವ್ ಮಾನೆ, ಶ್ರೀನಿವಾಸ ರಾವ್ ಮಗರ್, ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಗಿರೀಶ್ ರಾವ್ ಉಪಸ್ಥಿತರಿರುವರು ಎಂದು ಕೆ.ಕೆ.ಎಂ.ಪಿ. ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್, ಕಾರ್ಯದರ್ಶಿ ಸಂತೋಷ್ ರಾವ್, ತಾಲೂಕು ಘಟಕದ ಅಧ್ಯಕ್ಷ ಕೆ.ಬಿ. ಕೀರ್ತನ್ ಕುಮಾರ್ ಲಾಡ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ
ಮಧ್ಯಾಹ್ನ 1:30ರ ಅನಂತರ ವೈವಿಧ್ಯಮಯ, ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಲಾವಣಿ, ವೀರಗಾಸೆ, ಶಿವಾಜಿ ಕುರಿತಾದ ನಾಟಕ ಪ್ರದರ್ಶನಗೊಳ್ಳಲಿದೆ. ಕಲಾಸಕ್ತರು ಭಾಗವಹಿಸುವಂತೆ ಸಮಿತಿಯವರು ವಿನಂತಿಸಿದ್ದಾರೆ.