Saturday, October 1, 2022
spot_img
Homeಸುದ್ದಿಕಾಳಿ ಮಾತೆ ಬಾಯಲ್ಲಿ ಸಿಗರೇಟು : ಸಿನೇಮಾ ಪೋಸ್ಟರ್‌ಗೆ ಭಾರಿ ವಿರೋಧ

ಕಾಳಿ ಮಾತೆ ಬಾಯಲ್ಲಿ ಸಿಗರೇಟು : ಸಿನೇಮಾ ಪೋಸ್ಟರ್‌ಗೆ ಭಾರಿ ವಿರೋಧ

ಹೊಸದಿಲ್ಲಿ: ಕಾಳಿ ಮಾತೆ ಸಿಗರೇಟು ಸೇವನೆ ಮಾಡುತ್ತಿರುವಂತೆ ಪೋಸ್ಟರ್‌ ವಿನ್ಯಾಸ ಮಾಡಿದ ಕಾಳಿ ಚಿತ್ರಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದುಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ.
ಕಾಳಿ ಎಂಬ ಸಾಕ್ಷ್ಯಚಿತ್ರದಲ್ಲಿ ಕಾಳಿಯ ರೂಪದಲ್ಲಿರುವ ನಟಿಯ ಬಾಯಲ್ಲಿ ಸಿಗರೇಟು ಇದೆ. ಟ್ವಿಟ್ಟರ್‌ನಲ್ಲಿ ನಿರ್ದೇಶಕಿ ಲೀನಾ ಮಣಿಮೇಖಲಾ ಎಂಬವರು ಈ ಪೊಸ್ಟರ್‌ನನ್ನು ಹಂಚಿಕೊಂಡ ಬಳಿಕ ವಿರೋಧ ವ್ಯಕ್ತವಾಗಿದೆ. ಕೆಲವರು ಮಣಿಮೇಖಲಾ ಅವರನ್ನು ಬಂಧಿಸಲು ಒತ್ತಾಯಿಸಿದ್ದಾರೆ.
ಕೆಲವರು ಉಳಿದ ಧರ್ಮಗಳಿಗೆ ಇರುವ ಧರ್ಮನಿಂದೆ ಭಾವನೆ ಹಿಂದು ಧರ್ಮಕ್ಕೆ ಅನ್ವಯವಾಗುವುದಿಲ್ಲವೆ ಎಂದು ನೂಪುರ್‌ ಶರ್ಮ ವಿವಾದದ ಹಿನ್ನೆಲೆಯಲ್ಲಿ ಪ್ರಶ್ನಿಸಿದ್ದಾರೆ.
ಹಿಂದುಗಳ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಉದ್ವಿಗ್ನ ಸ್ಥಿತಿ ಸೃಷ್ಟಿಸಲೆಂದು ಕೆಲವರು ಇಂಥ ದುಸ್ಸಾಹಸ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಪುಕ್ಕಟೆ ಪ್ರಚಾರ ಸಿಗುತ್ತದೆ. ಇದೆಲ್ಲ ಟೂಲ್‌ಕಿಟ್‌ ಭಾಗ ಎಂದು ಕೆಲವು ಮಂದಿ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!